ಕುಮಟಾ ತಾಲೂಕಿನ ಜನತಾ ವಿದ್ಯಾಲಯ ಧಾರೇಶ್ವರ ಮತ್ತು ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರದ ಸಂಯುಕ್ತ ಆಶ್ರಯದಲ್ಲಿ ನಮ್ಮ ಸಂವಿಧಾನ ವಿಷಯದ ಮೇಲೆ ಸಂವಿಧಾನ ಸನ್ಮಾನ ಅಭಿಯಾನದ ಕಾರ್ಯಕ್ರಮದ ಅಡಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಜೇತರಿಗೆ ಶಿಕ್ಷಣ ಪ್ರಕೋಷ್ಠ ದ ರಾಜ್ಯ ಸಾಹಸoಚಾಲಕರಾದ ಎಂ ಜಿ ಭಟ್ ರವರು ಬಹುಮಾನ ವನ್ನು ವಿತರಿಸಿ ದೇಶ ಭಕ್ತಿ ನಮ್ಮ ಉಸಿರಿನ ಕಣ ಕಣದಲ್ಲೂ ತುಂಬಿರಬೇಕು. ಎಂದರು.ಸಂವಿಧಾನದ ಮೇಲೆ ಹಲವು ವಿಷಯಗಳ ಕುರಿತು ಮಾತನಾಡಿದರು. ಸಂವಿಧಾನದ ರಚನೆ ಮಹತ್ವ, ನಮ್ಮ ಭಾಧ್ಯತೆ, ಹಾಗೂ ಸಂವಿಧಾನದ ರಚನೆ ಯಲ್ಲಿ ಅಂಬೇಡ್ಕರರ ಪಾತ್ರ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಕುರಿತು ಅರಿವು ಹೆಚ್ಚಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿದರ
ಈ ಸಂದರ್ಭದಲ್ಲಿ ಜನತಾ ವಿದ್ಯಾಲಯ ಹಾರೇಶ್ವರದ ಮುಖ್ಯ ಅಧ್ಯಾಪಕರಾದ ಶ್ರೀ ಗೋಪಿನಾಥ್ ಭಜಂತ್ರಿ ಹಾಗೂ
ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಜಗದೀಶ್ ಗುನಗ ಇದ್ದರು ಯೋಗೇಶ್ ಪಟಗಾರರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಉಳಿದ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.
