‘ದಿನಕರರ ಸ್ಮರಣೆಯಲ್ಲಿ ಬೆಳಗಿದ ಎಪ್ಪತ್ತರ ಜ್ಯೋತಿ’
ಕುಮಟಾ: ‘ಜ್ಞಾನ, ಕೌಶಲ್ಯ, ಆರೋಗ್ಯ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡ ವ್ಯಕ್ತಿ ಜೀವನದಲ್ಲೆಂದೂ ಸೋಲಲಾರ. ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಜೀವನಪ್ರೀತಿಯಿಂದ ಅತಂರಂಗ ಗಟ್ಟಿಯಾಗಿಸಿಕೊಳ್ಳಬೇಕು. ಮನಸ್ಸಿನ ಧಿಃಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಬರುವ ಅವಕಾಶಗಳನ್ನೆಂದೂ ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೇಸಲವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ದೊರೆಯುತ್ತದೆ. ಮಾನವೀಯತೆಯನ್ನು ಗುರುತಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ, ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು’ ಎಂದು ನಿವೃತ್ತ ಮುಖ್ಯಾಧ್ಯಾಪಕ ಎನ್.ಆರ್. ಗಜು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢಶಾಲೆಯ 70ನೆಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರತ್ನಾಕರ ನಾಯ್ಕ ಅವರು ಶಾಲಾ ಹಸ್ತಪತ್ರಿಕೆ ‘ಅಭಿಜಾತ’ವನ್ನು ಅನಾವರಣಗೊಳಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಯಾವತ್ತೂ ನೆರವಿನ ಹಸ್ತ ಚಾಚುವುದಾಗಿ ಘೋಷಿಸಿದರಲ್ಲದೇ, ತಮ್ಮ ಶಾಲೆ ತಮ್ಮ ಹೆಮ್ಮೆಯೆಂದುಕೊಂಡು ಎಲ್ಲದಕ್ಕೂ ತಾವು ಬೆಂಗಾವಲಾಗಿ ನಿಲ್ಲುತ್ತೇನೆಂದರು. ಆತ್ಮ ಪರೀಕ್ಷೆ, ಅಂತಃಸತ್ವಗಳನ್ನು ತಿಳಿದುಕೊಂಡು, ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆಯನ್ನು ಮೈಗೂಡಿಕೊಂಡು ಪ್ರಗತಿಪಥದಲ್ಲಿ ವಿದ್ಯಾರ್ಥಿಗಳು ಸಾಗಬೇಕೆಂದು ಕರೆ ಕೊಟ್ಟರು. ನ್ಯಾಯವಾದಿ ಮಮತಾ ಆರ್. ನಾಯ್ಕ ಅವರು ಶಾಲಾ ಸ್ನೇಹ ಸಮ್ಮೇಳನದಲ್ಲಿ ಪಾಲಕರ ಭಾಗಿಯಾಗುವಿಕೆಯ ಔಚಿತ್ಯವನ್ನು ಅರುಹಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಸ್.ಎಸ್. ಭಟ್ ಲೋಕೇಶ್ವರ, ನಿವೃತ್ತ ಸಂಸ್ಕøತ ಉಪನ್ಯಾಸಕ ಗೋಪಾಲ ಹೆಗಡೆ, ಶಿಕ್ಷಣಾಭಿಮಾನಿ ಎಚ್.ಎಸ್. ಹಳ್ಳೇರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಕುಮಾರಿ ಮಾನಸಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಮುಖ್ಯಾಧ್ಯಾಪಕ ಸಂದೇಶ ಡಿ. ಉಳ್ಳಿಕಾಸಿ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಬ್ರಾಯ ಜಿ. ನಾಯ್ಕ ಅಧ್ಯಕ್ಷೀಯ ಮಾತುಗಳನ್ನಾಡಿದರು. ಶಿಕ್ಷಕರಾದ ಐ.ವಿ ಭಟ್ಟ, ರಂಜನಾ ಬಿ, ಸಿ.ಬಿ. ಪಿಸ್ಸೆ, ತನುಜಾ ನಾಯಕ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಧುಕರ ಜೆ. ನಾಯಕ ಕ್ರೀಡಾ ಸಂಪದವನ್ನು ನಡೆಸಿಕೊಟ್ಟರು. ಶಿಕ್ಷಕ ಫಕ್ಕೀರಪ್ಪ ಎಚ್. ನಾಗಣ್ಣವರ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ಸುಮುಖ ಆಚಾರಿ, ಕುಮಾರಿ ಮಾನ್ಯ ನಾಯ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ವಾಲಿಬಾಲ್ ಪಟು ಯತೀಶ್ ನಾಯ್ಕ, ರಾಜ್ಯಮಟ್ಟದ ಓಟಗಾರ್ತಿ ಜಯಾ ಗೌಡ, ಸ್ವಯಂ ನಿವೃತ್ತಿ ಪಡೆದ ಮುಖ್ಯ ಅಡಿಗೆ ಸಿಬ್ಬಂದಿ ಜಯಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಅಪರಾಹ್ನದ ಹೊತ್ತು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
