ಕೆ ಆರ್ ಎಸ್ ಸೈನಿಕರೇ ಶಿಗ್ಗಾವಿ-ಸವಣೂರು ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ನಮ್ಮ ನೆಚ್ಚಿನ KRS ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಶ್ರೀ ರವಿ ಕೃಷ್ಣಾರೆಡ್ಡಿಯವರು ಚುನಾವಣೆ ಸಮಯದಲ್ಲಿ ತಮ್ಮ ಗಮನಕ್ಕೆ ಬಂದಿರುವ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ರೈತರು ಉತ್ತಮ ಗುಣಮಟ್ಟದ ಬೀಜಗಳು, ರಸಗೊಬ್ಬರ, ಕೀಟನಾಶಕಗಳಿಗೆ MRP ಗಿಂತ ಜಾಸ್ತಿ ಬೆಲೆ ಕೊಡುವುದನ್ನು ತಪ್ಪಿಸಲು “KRS ರೈತ ಸಮೃದ್ಧಿ ಕೇಂದ್ರ” ವನ್ನು ಸ್ಥಾಪಿಸಿದ್ದಾರೆ. ರೈತರಿಗೆ ಕೃಷಿಯಲ್ಲಿ ಖರ್ಚು ಕಮ್ಮಿ ಮಾಡಿ, ಲಾಭಾಂಶ ಹೆಚ್ಚು ಮಾಡಿಕೊಡುವ ದೃಷ್ಠಿಯಿಂದ MRP ದರದಲ್ಲಿ ಮತ್ತು ಇನ್ನೂ ಕಡಿಮೆ ದರಗಳಲ್ಲಿ ಗುಣಮಟ್ಟದ ಬೀಜಗಳನ್ನು, ರಸಗೊಬ್ಬರವನ್ನು, ಕೀಟನಾಶಕಗಳನ್ನು “KRS ರೈತ ಸಮೃದ್ಧಿ ಕೇಂದ್ರ” ದಲ್ಲಿ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ.
ಈ ಕೇಂದ್ರದ ಉದ್ಘಾಟನೆಯನ್ನು ಜನವರಿ 14, 2025 ಮಂಗಳವಾರ, ಮಕರ ಸಂಕ್ರಾಂತಿಯ ಶುಭದಿನದಂದು ಬೆಳಿಗ್ಗೆ 11 ಗಂಟೆಗೆ ಶಿಗ್ಗಾವಿ ಸವಣೂರು ಮತಕ್ಷೇತ್ರದ ರೈತರು, ಶ್ರೀ ರವಿ ಕೃಷ್ಣಾರೆಡ್ಡಿಯವರ ಸಮ್ಮುಖದಲ್ಲಿ ನೆರವೇರಿಸಲಿದ್ದಾರೆ. ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿ.
ಧನ್ಯವಾದಗಳೊಂದಿಗೆ,
KRS ತಂಡ