ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯ ಸರ್ಕಲ್ ನಲ್ಲ್ಲೇ DR ಕಿಶನ್ ಎಂಬ ಸ್ವಯಂಘೋಷಿತ ವೈದ್ಯ ಕಮಲ ಎಂಬ ನಕಲಿ ಕ್ಲಿನಿಕ್ ಒಂದನ್ನ ಸುಮಾರು 30 ವರ್ಷ ಗಳಿಂದ ನಡೆಸಿ ಕೊಂಡು ಬರುತ್ತಿದ್ದು ನಿನ್ನೆ ಭಾನುವಾರ ಶಿವಮೊಗ್ಗ ದ ಪ್ರಜಾಪ್ರಭುತ್ವ ಮಾನವ ಹಕ್ಕುಗಳ ಆಯೋಗಕ್ಕೆ ಸಾರ್ವಜನಿಕ ದೂರು ಬಂದ ಕಾರಣ ಆಯೋಗದ ಪದಾಧಿಕಾರಿಗಳು ನಕಲಿ ಕಮಲ ಕ್ಲಿನಿಕ್ ಪರಿಶೀಲಿಸಿದಾಗ ನಕಲಿ ಸರ್ಟಿಫಿಕೇಟ್ ಗಳನ್ನು ತೋರಿಸಿ ನಂಬಿಸುವ ಎಲ್ಲಾ ಪ್ರಯತ್ನ ನಡೆಸಿದ್ದು . ಪ್ರಜಾ ತತ್ವ ಮಾನವ ಹಕ್ಕುಗಳ ಆಯೋಗದ ಪದಾಧಿಕಾರಿಗಳಿಗೆ ಈ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತವಾಗಿ ಕ್ಲಿನಿಕ್ ಒಳಗಡೆ ಪ್ರವೇಶಿಸಿದಾಗ ಅಲ್ಲಿರುವ ಒಂದು ರೂಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಭಾರಿ ಪ್ರಮಾಣದ ಔಷಧಗಳನ್ನು ನೋಡಿ ಗಾಬರಿ ಆಗಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕಾಲ್ ಮಾಡಿದಾಗ ಇಂದು ಭಾನುವಾರ ಹೊರಗಡೆ ಇದ್ದೇವೆ ಎಂದು ತಿಳಿಸಿರುತ್ತಾರೆ.
ಆಯೋಗದ ಸದಸ್ಯರು ನಕಲಿ ಡಾಕ್ಟರನೊಟ್ಟಿಗೆ ಅಲ್ಲಿರುವ ಚುಚ್ಚುಮದ್ದು ನೀಡಿ ಬಕೆಟ್ ಅಲ್ಲಿ ಹಾಕಿರುವ ಸಿರಂಜ್ ಗಳು. ಚುಚ್ಚುಮದ್ದುಗಳ ಕಾಲಿ ಬಾಟಲ್ ಗಳು ಆಂಟಿಬೈಟಿಕ್ ಇಂಜೆಕ್ಷನ್ ಗಳು. ಪ್ರಗ ನ್ಯೂಸ್ ಕಿಟ್ ನೋವಿನ ಮಾತ್ರೆಗಳು. ಸಕ್ಕರೆ ಕಾಯಿಲೆಗೆ ಕೊಡುವ ರಾಶಿ ರಾಶಿ ಮಾತ್ರೆಗಳು ಗರ್ಭಪಾತಕ್ಕೆ ಬಳಸುವ ಮಾತ್ರೆಗಳು. ಇವೆಲ್ಲವೂ ಸಹ ದೊರಕಿದ್ದು 30 ವರ್ಷಗಳಿಂದ ಯಾವುದೇ ರೀತಿಯಾದ ವೈದ್ಯಕೀಯ ವೃತ್ತಿ ಗೆ ಸಂಬಂಧಿಸಿದ ಸರ್ಟಿಫಿಕೇಟ್ಗಳನ್ನು ಪಡೆಯದೆ ಕೇವಲ puc ಓದಿಕೊಂಡಿರುವ ನಕಲಿ ಡಾಕ್ಟರ್ ಇಷ್ಟೆಲ್ಲ ವ್ಯವಹಾರ ನಡೆಸುತ್ತಿದ್ದರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ದಿನ ಬೆಳಗಾದರೆ ಓಡಾಡುವ ಜಿಲ್ಲಾ ಆರೋಗ್ಯ ಅಧಿಕಾರಿಗಳು. ತಾಲೂಕ್. ಆರೋಗ್ಯ ಅಧಿಕಾರಿಗಳು. ಆಯುಷ್ ಇಲಾಖೆಯ ಅಧಿಕಾರಿಗಳು. ಡ್ರಗ್ ಕಂಟ್ರೋಲರ್. ಇವರೆಲ್ಲ ಇನ್ನಾವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂಬುದು ತಿಳಿಯಬೇಕಾಗಿದೆ’ ಸ್ಥಳೀಯರು ಯಾರಾದರೂ ಈ ವ್ಯಕ್ತಿಯ ಬಗ್ಗೆ ಧ್ವನಿ ಎತ್ತಿದರೆ ಪುಡಿ ರೌಡಿಗಳು ಕೆಲವು ರಾಜಕೀಯ ಪ್ರಭಾವಗೊಳಿಸಿ ಹೆದರಿಸಿ 30 ವರ್ಷಗಳಿಂದ ನಕಲಿ ವೈದ್ಯಕೀಯ ವ್ಯಕ್ತಿ ಮಾಡುತ್ತಿರುವ ಸ್ವಯಂಘೋಷಿತ ಡಾಕ್ಟರ್ ಕಿಶನ್ ಮೇಲೆ ಯಾಕೆ ಯಾವುದೇ ಅಧಿಕಾರಿಗಳು ಇದುವರೆಗೆ ಒಂದು ಕೇಸ್ ಜಡಿದು ಕ್ಲಿನಿಕ್ ಬಂದು ಮಾಡಿಸಲು ಸಾಧ್ಯವಾಗಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ ಯಾಗಿದ್ದು ಇನ್ನಾದರೂ ಶಿವಮೊಗ್ಗ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಈ ತರದ ಕ್ಲಿನಿಕ್ ಗಳಿಗೆ ಬೀಗ ಜಡಿಯುವರೇ ಕಾದುನೋಡಬೇಕಿದೆ.

MH ರಾಘವೇಂದ್ರ ಸಂಪೋಡಿ.