ಕಾಗವಾಡ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೂಗೂಳ, ಮಂಗಾವತಿ ಶಹಾಪೂರ ಗ್ರಾಮಗಳನ್ನು ಶ್ರೀಘ್ರದಲ್ಲಿಯೇ ಸುಶಿಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದ ಶಾಸಕ ರಾಜು ಕಾಗೆ.
ಶನಿವಾರದಂದು ಕಾಗವಾಡ ತಾಲೂಕಿನಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ನೂತನ ಮಂಜೂರಾದ ಸಮುದಾಯ ಭವನಗಳಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು ಶ್ರೀಘ್ರದಲ್ಲಿಯೇ ಕೃಷ್ಣಾನದಿ ದಡದಲ್ಲಿ ಬರುವ ಜೂಗೂಳ, ಮಂಗಾವತಿ, ಶಹಾಪೂರ ಗ್ರಾಮಗಳನ್ನ ಸುರಕ್ಷಿತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲಾಗಿವುದು ಎಂದರು ಇದಲ್ಲದೆ ಈ ಸಂಭಂದ ಈಗಾಲೆ ನಾನು ಮಾನ್ಯ ಮುಂಖ್ಯಮಂತ್ರಿಗಳಾದ ಸಿದ್ದರಾಮಯ್ಯರಿಗೆ ಹಾಗೂ ಉಪಮುಖ್ಯ ಮಂತ್ರಿಗಳಾದ ಡಿಕೆ ಶಿವಕುಮಾರ ರೊಂದಿಗೆ ಚರ್ಚಸಿದ್ದನೆ ಇನ್ನೂ ಕಲವೇ ತಿಂಗಳಲ್ಲಿಯೇ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗುವುದು
ಮಳೆಗಾಲದ ಅವಧಿಯಲ್ಲಿ ಈ ಮೂರು ಗ್ರಾಮಗಳಲ್ಲಿ ಮಹಾಪೂರ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ತಿಂಗಳುಗಟ್ಟಲೇ ನೀಲುತ್ತದೆ ಅದಕ್ಕಾಗಿಯೇ ಅತೀ ಶ್ರೀಘ್ರದಲ್ಲಿಯೇ ಗ್ರಾಮಗಳನ್ನ ಸ್ಥಳಾಂತರಕ್ಕೆ ನಿರ್ಧರಿಸಲಾಗುವುದು ಎಂದರು.
ಇದಾದ ಬಳಿಕ ಮಂಗಾವತಿ ಕಾಗವಾಡ ಮಧ್ಯದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದ್ದು ಟೆಂಡರ್ ಪ್ರಕ್ರೀಯೆ ಕೇಲವೇ ದಿನಗಳಲ್ಲಿಯೇ ಪೂರ್ಣಗೋಂಡು ಶಂಕುಸ್ಥಾಪನೆ ನೆರವೇರಿಸುವೆ ಎಂದರು. ಮತ್ತು ಇವತ್ತು ಕಾಗವಾಡ ಮತಕ್ಷೇತ್ರದ 60 ಗ್ರಾಮಗಳಲ್ಲಿ 72 ಸಮುದಾಯದ ಭವನ ನಿರ್ಮಾಣಗಳ ನಿರ್ಮಾಣಕ್ಕೆ 13. ಕೋಟಿ ರೂ ಅನುದಾನ ಮಂಜೂರಾಗಿವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮುಂದಿನ ಕೇಲವೇ ತಿಂಗಳಲ್ಲಿಯೇ ಪೂರ್ಣಗೋಳ್ಳುತ್ತವೆ ಎಂದರು.
ಅಲ್ಲದೆ ಬಹುದಿನಗಳಿಂದ ಹಲವಾರು ಸಮಾಜದ ಬಾಂದವರು ಸಮುದಾಯ ಭವನಗಳನ್ನು ಮಾಡಬೇಕೆಂದು ನನ್ನ ಬಳಿ ಹೇಳಿಕೋಂಡಿದ್ದರು ಅದಕ್ಕಾಗಿಯೇ ಮುಖ್ಯಮಂತ್ರಿಗಳಿಂದ 25. ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸಿಕ ಕೊಂಡು ಬಂದ್ದಿದೆನೆ ಅದರಲ್ಲಿ 13 ಕೋಟಿ ರೂ ಗಳಲ್ಲಿ ಸಮುದಾಯ ಭವನಗಳು ಮತ್ತು 12 ಕೋಟಿ ರೂ ಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಉಪಯೋಗಿಸಲಾಗುತ್ತದೆ ಮತ್ತು ಇವತ್ತು 13 ರಿಂದ 14 ಸಮುದಾಯ ಭವನಗಳ ಭೂಮಿ ಪೂಜೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮಗಳ ಸಮುದಾಯ ಭವನಗಳು ಎಲ್ಲೆಲ್ಲಿ?
1) ಜೂಗೂಳ ಗ್ರಾಮದ ಶ್ರಿ ಯಲ್ಲಮ ದೇವಿ ಗುಡಿಯ ಹತ್ತಿರ ಸಮುದಾಯ ಭವನ ಭೂಮಿ ಪೂಜೆ, 2) ಮಂಗಾವತಿ ಗ್ರಾಮದ ಮಹಾದೇವ ಗುಡಿ ಹತ್ತಿರ ಸಮುದಾಯ ಭವನ ಭೂಮಿ ಪೂಜೆ, 3) ಶಾಹಾಪುರ ಗ್ರಾಮದ ಶ್ರೀ ಭರಮಪ್ಪ ಗುಡಿಯ ಹತ್ತಿರ ಸಮುದಾಯ ಭವನ ಪೂಜೆ, 4) ಮೋಳವಾಡ ಗ್ರಾಮದ ಶ್ರೀ ಮಾರುತಿ ಗುಡಿಯ ಹತ್ತಿರ ಸಮುದಾಯ ಭವನ ಭೂಮಿ ಪೂಜೆ, 5) ಕುಸನಾಳ ಗ್ರಾಮದಲ್ಲಿ ಭಗವಾನ ೧೦೮ ಶಾಂತಿನಾಥ ಜೈನ ಬಸದಿ ಹತ್ತಿರ ಸಮುದಾಯ ಭವನ ಭೂಮಿ ಪೂಜೆ, 6) ಉಗಾರ ಬುದ್ರುಕ ಪೀರ ಮುಮ್ಮುಲಾಲಬಾಬಾ ದರ್ಗಾ ಜೀರ್ಣೋದ್ಧಾರ ಕಾಮಗಾರಿಗೆ ಭವನ ಭೂಮಿ ಪೂಜೆ, 7) ಶ್ರಿ ಭರಮಪ್ಪ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ,8) ಶ್ರೀ ಮರಗುಬಾಯಿ ದೇವರ ಗುಡಿಯ ಹತ್ತಿರ ಸಮುದಾಯ ಭವನ ಪೂಜೆ , 9) ಫರೀಧಖನವಾಡಿ ಶ್ರೀ ಲಕ್ಷ್ಮಿ ದೇವಸ್ಥಾನದ ಹತ್ತಿರ ಸಮುದಾಯ ಭವನ ಭೂಮಿ ಪೂಜೆ, 10) ಮಂಗಸೂಳಿ ವೀರ ಶೈವ ಪಂಚಮಸಾಲಿ ಸಮಾಜ ಸೇವಾ ಸಂಘದ ಸಮುದಾಯ ಭವನಕ್ಕೆ, 11) ಶ್ರೀ ಬೀರೊಬಾ ದೇವರ ಪಾಲಕೀ ಗ್ರಹದ ಹತ್ತಿರ ಸಮುದಾಯ ಭವನಕ್ಕೆ 12) ಶ್ರೀ ಮಸೋಬಾ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ಭೂಮಿ ಪೂಜೆ ಶ್ರೀ ರೇಣುಕಾ ಖಟಾವಿ ಎಲ್ಲಮ್ಮದೇವಿ ದೇವಸ್ಥಾನ ಹತ್ತಿರ ಈ ಎಲ್ಲಕಡೆಗಳಲ್ಲಿ ಶಾಸಕ ರಾಜು ಕಾಗೆ ಭೂಮಿ ಪೂಜೆ ನೆರವೇರಿಸಿದರು,
ಈ ಸಂಧರ್ಭದಲ್ಲಿ ಕ್ರೀಯಾಶೀಲ ಜಿ.ಪಂ ಅಧಿಕಾರಿ ವೀರಣ್ಣವಾಲಿ ಕಿರಿಯ ಅಭಿಯಂತರ ಮಡಿವಾಳ ಪಾಟೀಲ, ಅನಿಲಕುಮಾರ ಸತ್ತಿ, ಅನಿಲ್ ಸಿಂಧೆ ಹರ್ಷ ಮಗದುಮ್, ಸುನೀಲ್ ಅವಟಿ, ಸುನೀಲ ತೇಲಿ, ಸುನೀಲ್ ಪಾಟೀಲ್, ಶ್ರೀಮಂತ ಸಲಗರೆ, ಬಾಲಾಜಿ ಪಾಟೀಲ್ ಅನೀಕುಮಾರ ಪಾಟೀಲ್, ಈಶ್ವರ ಕೋಳಿ, ವಸಂತ ಗಾಡಿವಡ್ಡರ, ವಸಂತ ಕೋತ, ತಾತ್ಯಾಸಾಹೇಬ್ ಪಾಟೀಲ್, ರವೀಂದ್ರ ಪೂಜಾರಿ ಮುಕುಂದ ಪೂಜಾರಿ, ಕುಸನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ನಾಂದನಿ. ಚಿದಾನಂದ್ ಅಥಣಿ.ಮುಖಂಡರಾದ ಮಾರುತಿ ಕೊಕಣೆ. ಸತೀಶ್ ಬಿರಾದರ.ಸುದರ್ಶನ ನಾಂದನಿ. ರಾಜು ನಾಂದನಿ.ರಾಕೇಶ ಮುಕರೆ. ಸಾಗರ ದುಗ್ಗೆ , ಯುವ ಧುರೀಣರಾಧ ರಾಹುಲ್ ಶಹಾ, ವೀಫುಲ್ ಪಾಟೀಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
