ಇಂಡಿ: ತಾಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಇಂಡಿ ತಾಲೂಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ 2025-30 ನೇ ಸಾಲಿಗೆ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್ ವ್ಹಿ ಹರಳಯ್ಯ ಹಾಗೂ ಪಿ ಜಿ ಕಲ್ಮನಿ ಅವರನ್ನು ತಾಲೂಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್ ವ್ಹಿ ಹರಳಯ್ಯ, ಸಂಘದ ಬೆಳವಣಿಗೆಯೇ ನಮ್ಮ ಮೊದಲ ಆದ್ಯತೆ. ಶಿಕ್ಷಕ ಸ್ನೇಹಿ ಸಂಘವಾಗಿ ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಉಪಾಧ್ಯಕ್ಷ ಪಿ ಜಿ ಕಲ್ಮನಿ ಮಾತನಾಡಿ, ಸಂಘದ ಅಭಿವೃದ್ಧಿ ನಮ್ಮ ಮೂಲಮಂತ್ರ. ಹೆಚ್ಚು ಹೆಚ್ಚು ಸದಸ್ಯರನ್ನು ಒಳಗೊಂಡು ಜಿಲ್ಲೆಗೆ ಮಾದರಿ ಸಂಘ ಮಾಡುವತ್ತ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ತಾಲೂಕ ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಕೊಳೆಕರ ಮಾತನಾಡಿ, ಸಂಘದ ಪ್ರಗತಿಯು ಎಲ್ಲರಿಗೂ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಈ ಸಂಘವು ಬೆಳೆಯಲಿ ಎಂದು ಆಶಿಸಿದರು.
ಜಿಪಿಟಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಕಾರಿ, ಖಜಾಂಚಿ ಶಶಿಕುಮಾರ ವಡ್ಡರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹಣಮಂತರಾಯ ಪೂಜಾರಿ, ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಭಕ್ಷ ವಾಲೀಕಾರ, ಕಾಂತು ಇಂಡಿ, ದಶರಥ ಕೋರಿ, ಜಯರಾಮ್ ಚವ್ಹಾಣ, ಸುರೇಶ ಚವ್ಹಾಣ, ಬಿ ಎಸ್ ಸೊನ್ನದ, ಸಂತೋಷ ಬಂಡೆ, ಸಿದ್ದು ಡಾಬೆ, ಮಹಾದೇವ ಗಬಸಾವಳಗಿ, ಉಮೇಶ ಭಜಂತ್ರಿ, ರಾಜಕುಮಾರ ಬೆಣ್ಣೆಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ. ಉಮೇಶ ಕಟಬರ.
