ಹಾವೇರಿ ಬ್ಯಾಡಗಿ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಮನಿ ಕಳ್ಳತನ ಪ್ರಕರಣಗಳ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಅಂಶು ಕುಮಾರ್ ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ಶಿರಕೋಳರವರು ಎಂ .ಎಸ್. ಪಾಟೀಲ್ ಡಿ.ಎಸ್.ಪಿ ಹಾವೇರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದು ಸದರಿ ತಂಡದಲ್ಲಿ ತನಿಖಾಧಿಕಾರಿಯಾಗಿ ನೇಮಕಗೊಂಡ ಸಿ.ಪಿ.ಐ ಮಹಾಂತೇಶ ಕೆ. ಲಂಬಿ ಬ್ಯಾಡಗಿ ವೃತ್ತಿ ಸಂತೋಷ ಪವಾರ ಸಿ.ಪಿ.ಐ ಹಾವೇರಿ ಗ್ರಾಮೀಣ ವೃತ್ತಿ ಶ್ರೀ ನಿಂಗರಾಜ ಕೆ. ಪಿ. ಎಸ್. ಐ ಹಾವೇರಿ ಗ್ರಾಮೀಣ ಶ್ರೀಮತಿ ಭಾರತಿ ಕೆ.ಪಿ.ಎಸ್.ಐ ಬ್ಯಾಡಗಿ ಠಾಣಾ ಹಾಗೂ ಸಿಬ್ಬಂದಿ ಲೊಕೇಶ ಲಮಾಣಿ ಗುಡ್ಡಪ್ಪ ಹಳ್ಳೂರು ಅಶೋಕ ಬಾರ್ಕಿ ರಾಜು ಗೊಂದಲ, ಇದಾಯತ್ ದೊಡ್ಡ ಮುಲ್ಲಾ ಮಹೇಶ್, ತೇವರಿ, ಬೀರಪ್ಪ ಹುಲಿ ಹಳ್ಳಿ ಶಿವರಾಜ ಹನುಮಂತ ಬೇಳಕೆರಿ ಎಸ್ ಎನ್ ಸೌಧಿ ಪಿಎಸ್ ಲಮಾಣಿ ರವರ ಕಾರ್ಯಾಚರಣೆಯ ತಂಡದಲ್ಲಿ ಆರೋಪಿ ಬಿ ಶಿವಕುಮಾರ್ ತಂದೆ ದೇವೇಂದ್ರಪ್ಪ ಬಾವಿಮನಿ ವಯಸ್ಸು 27 ವರ್ಷ ಈ ಆರೋಪಿ ಯು ಹೂವಿನಹಡಗಲಿ ತಾಲೂಕು ವಿಜಯನಗರ ಜಿಲ್ಲೆ, ಮಾನ್ಯರ ಮಸಲ್ವಾಡ ಗ್ರಾಮವಾಸಿಯಾಗಿದ್ದು ಈತನ ವಿವಿಧ ಆಯಾಮಗಳ ಮೂಲಕ ಪತ್ತೆ ಹಚ್ಚುವಲ್ಲಿ ಗುತ್ತಲ ಪೊಲೀಸ್ ಟೀಮ್ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಸದರಿ ಆರೋಪಿತನ ವಿಚಾರಣೆಯ ಹೇಳಿಕೆಯ ಮೇರೆಗೆ ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ ಸನ್ 2024ನೇ ಸಾಲಿನ ಏಪ್ರಿಲ್ ತಿಂಗಳು ಹಗಲು ಸಮಯದಲ್ಲಿ ಅಗ್ನಿಶಾಮಕ ಠಾಣೆ ಹತ್ತಿರ ಹೊಸ ಪ್ಲಾಟ್ ದಲ್ಲಿ ಒಂದು ಬೀಗ ಹಾಕಿದ ಮನೆ ಕಳ್ಳತನ ಹಾಗೂ ಸನ್ 2025ನೇ ಸಾಲಿನ ಏಪ್ರಿಲ್ ತಿಂಗಳು ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾರದ ಕಡೆಗೆ ಹೋಗುವ ರಸ್ತೆಯಲ್ಲಿ ಅದೇ ಏಪ್ರಿಲ್ ತಿಂಗಳಿನಲ್ಲಿ ಹಗಲು ಮನೆಕಳ್ಳತನ ಮಾಡಿ ಬಚ್ಚಿಟ್ಟಿದ್ದ ಸುಮಾರು ಏಳು ಲಕ್ಷದ 50 ಸಾವಿರ ಕಿಮ್ಮತ್ತಿನ ೧೦೬ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ ಸದರಿ ಬ್ಯಾಡಗಿ ಹಾಗೂ ಗುತ್ತಲ ಪೊಲೀಸ್ ತಂಡದ ಕಾರ್ಯವನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶಿಸಿ ಈ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.
