ಯಾದವಾಡ : ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವವು ಪ್ರತಿವರ್ಷದಂತೆ ಈ ವರ್ಷವು ಎಪ್ರೀಲ್ ತಿಂಗಳ ದವನದ ಹುಣ್ಣಿಮೆಯಂದು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ರಥವನ್ನು ಕಬ್ಬು ತಳೀರು ತೊರಣ ಹೂವು , ರುದ್ರಾಕ್ಷಿ ಮಾಲೆಗಳಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ಭಕ್ತರು ಕಾಯಿ ಮತ್ತು ಬಾಳೆಹಣ್ಣು ಕಟ್ಟಿ ಹರಕೆ ತಿರಿಸಿದರು.
ಯಾದವಾಡ ಗ್ರಾಮದ ಚೌಕೇಶ್ವರ ಮಠದ ಸ್ವಾಮಿಜಿಗಳ ನೇತೃತ್ವದಲ್ಲಿ ಘಟ್ಟಗಿ ಬಸವೇಶ್ವರ ಮೂರ್ತಿಗೆ ರುದ್ರಾಭೀಷೇಕ ನೆರವೇರಿತು. ಗಾಮದೇವತೆ ಹೊನ್ನಮ್ಮಾದೇವಿಗೆ ಉಡಿತುಂಬುವ ಕಾರ್ಯಕ್ರಮ ನೆರವೆರಿತು. ಸಂಜೆ 6 ಘಂಟೆಗೆ ಚೌಕೇಶ್ವರ ಗದ್ದುಗೆಯಿಂದ ಸಣ್ಣರಥ , ನಂದಿ ಕೋಲು ,ವಾದ್ಯಮೇಳಗಳೊಂದಿಗೆ ಗ್ರಾಮದೇವತೆ ಹೊನ್ನಮ್ಮದೇವಿಯ ದರ್ಶನ ಪಡೆದು ಘಟ್ಟಗಿಬಸವೇಶ್ವರ ದೇವಸ್ಥಾನಕ್ಕೆ ಬರುತ್ತದೆ . ನಂತರ ದೊಡ್ಡ ರಥೋತ್ಸವ ಆರಂಭವಾಗುತ್ತದೆ ದೊಡ್ಡರಥ ಪಾದಗಟ್ಟಿ ಬಸವಣ್ಣನ ವರೆಗೆ ಬಂದು ಮರಳಿ ಹೊನ್ನಮ್ಮದೆವಿ ದರ್ಶನ ಪಡೆದು ಘಟ್ಟಗಿ ಬಸವೇಶ್ವರ ದೇವಸ್ಥಾನದವರೆಗೆ ರಥೋತ್ಸವ ನಡೆಯಿತು. ರಥಕ್ಕೆ ಜನರು ಉತ್ತತ್ತಿ , ಬಾಳೆಹಣ್ಣು ಬೆಂಡು ಬೆತ್ತಾಸ ಮತ್ತು ಖಾರೀಕ ಎಸೆದು ಭಕ್ತಿಯನ್ನು ಅರ್ಪಿಸಿದರು. ಯಾದವಾಡ ಗ್ರಾಮದ ಹಾಗೂ ಸುತ್ತ ಮುತ್ತಲಿನ ಹುಲಕುಂದ, ಕುಲಗೋಡ , ಸುಣಧೋಳಿ, ಮುಧೋಳ, ಉತ್ತೂರ ಮಾನಮ್ಮಿ ಗುಲಗಂಜಿಕೊಪ್ಪ ಗ್ರಾಮದ ಮಕ್ಕಳು ಮಹಿಳೆಯರು ಹಿರಿಯರು ಯುವಕರು ಮಹಾರಥೋತ್ಸವದಲ್ಲಿ ಭಾಗವಹಿಸಿ ರಥೋತ್ಸವವನ್ನು ಸಂಭ್ರಮಿಸಿದರು .
ಯಾದವಾಡ ಗ್ರಾಮದ ಜಾತ್ರೆಯು ರೈತರ ಜಾತ್ರೆಯಾಗಿದ್ದು ಈ ಜಾತ್ರೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡಿ ಬೇರೆ ಎತ್ತುಗಳನ್ನು ಖರೀದಿ ಮಾಡುತ್ತಾರೆ. ರೈತರ ಕ್ರೀಡೆಗಳಾದ ಒಂದು ನಿಮಿಷದ ಬಂಡಿ ಸ್ಪರ್ದೆ , ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ದೆ, ಟಗರಿನ ಕಾಳಗ ಸ್ಪರ್ದೆ, ತೆರೆಬಂಡಿ ಸ್ಪರ್ದೆ , ಕೂಡು ಗಾಡಿ ಬಂಡಿ ಸ್ಪರ್ದೆ,ಜಂಗಿ ನಿಕಾಲಿ ಕುಸ್ತಿಗಳು ಭಜನೆ ನಾಟಕ ರಸಮಂಜರಿ ಕಾರ್ಯಕ್ರಮಗಳು ಜರಗುತ್ತವೆ. ಜಾತ್ರೆಯ ನಿಮಿತ್ಯ ಐದು ದಿನಗಳವರೆಗೆ ಅನ್ನ ಸಂತರ್ಪಣೆ ಇರುವುದು.