ಪ್ರತಿ ವರ್ಷದಂತೆ ಈ ವರ್ಷ2025- 26ನೇ ಸಾಲಿನಲ್ಲಿ ಹನುಮಾನ್ ಜಯಂತಿಯನ್ನು ಸುರಪುರ ಪಟ್ಟಣದ ಕಬಾಡಗೇರಾ ಮುಳ್ಳ ಅಗಸಿ ಬಯಲು ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಜಯಂತಿ ಆಚರಣೆ ಮಾಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವೀರೇಶ್ ಪಂಚಾಂಗಮಠ ಇವರ ನೇತೃತ್ವದಲ್ಲಿ ಮಹಾ ಪೂಜೆ ಅಭಿಷೇಕ, ಮಂತ್ರ ಪಟನೆ ಹನುಮಾನ್ ಚಾಲೀಸ್ ಶ್ಲೋಕ ಮಾಡಿದರು. ಪೂಜಾ ಕಾರ್ಯಕ್ರಮದಲ್ಲಿ ಸುರಪುರ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು, ದೇವಸ್ಥಾನದ ಪ್ರಧಾನ ಅರ್ಚಕರು ಹನುಮಾನ್ ಜಯಂತಿಯ ಕುರಿತು ಹಿಂದುಗಳ ಒಗ್ಗಟ್ಟಿನ ಉಪದೇಶವನ್ನು ನೀಡಿದರು ಮುಂಬರುವ ವರ್ಷಗಳಲ್ಲಿ ಅತಿ ವಿಜ್ರಂಭಣೆಯಿಂದ ಹನುಮಾನ್ ಜಯಂತಿಯನ್ನು ಆಚರಿಸೋಣ ಎಂದು ತಿಳಿಸಿದರು.ಸಾರ್ವಜನಿಕ ರಿಗೆ ಪ್ರಸಾದ ವ್ಯವಸ್ಥೆ ಮಾಡಿ ಭಕ್ತಾದಿಗಳ ಪ್ರೀತಿಗೆ ಪಾತ್ರ ರಾದರು. ಪೂಜಾ ಕಾರ್ಯಕ್ರಮದಲ್ಲಿ ಪ್ರಮೋದ್ ಜೋಶಿ, ಮಹೇಶ್ ಹಳ್ಳದ್, ಭೀಮಾಶಂಕರ್ ಹಳ್ಳದ, ಮಲ್ಲಿಕಾರ್ಜುನ್ ಗೂಡರ್, ಆನಂದ್ ಗಡಗಡೆ, ಪ್ರಕಾಶ್ ಯಾದವ್ ಅಜಯ್ ಬಿಲ್ಲವ್, ವಿರೇಶ್ ಸಿರಗೋಜಿ,ಸಚಿನ್ ದಾಯಿ,ಶಂಕರ್ ಶೀಲವಂತ, ಗೋಪಾಲ್ ನಾಯಕ,ಆನಂದ್ ಮಡ್ಡಿ,ಹರ್ಷ ಹಳ್ಳದ, ಮಂಜುನಾಥ್ ಗಚ್ಚಿನಮನಿ,ಬಸಲಿಂಗಪ್ಪ ನಾವದಗಿ,ಹಾಗೂ ಸುರಪುರ ನಗರದ ಸಕಲ ಹನುಮಾನ್ ಭಕ್ತಾದಿಗಳು ಭಾಗವಹಿಸಿ ಹನುಮಾನ್ ಕೃಪೆಗೆ ಪಾತ್ರರಾದರು..
