ದೇವರ ಹಿಪ್ಪರಗಿ ತಾಲೂಕಿನ ಕೊರವಾರ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು.
ಪುರಾತನ ಕಾಲದ ಇತಿಹಾಸ ಹೊಂದಿರುವ ಕೊರವಾರ ಗ್ರಾಮದ ಆರಾಧ್ಯ ದೈವ ಬೇಡಿದ ವರವನ್ನು ನೀಡುವ ಕರುಣಾಮಯಿ ಕೊರವಾ ರೇಶ್ವರರ ಜಾತ್ರೆಯು 9 ದಿನಗಳ ಕಾಲ ಪ್ರತಿದಿನ ವಿಶೇಷ, ಅಭಿಷೇಕ ಪೂಜೆ, ಪಲ್ಲಕ್ಕಿ ಉತ್ಸವ, ರಾಮ ನವಮಿ ವಿಶೇಷ ಕಾರ್ಯಕ್ರಮ ರಾಮನನ್ನು ತೊಟ್ಟಿಲ ಕಾರ್ಯಕ್ರಮ,, ಬಾಲಕಂದಮ್ಮಗಳನ್ನು ಶಿಖರದ ಮೇಲಿಂದ ಕೆಳಗೆ ಹಾರಿಸುವ ಕಾರ್ಯಕ್ರಮ, ಮೊಸರಿನ ಗಡಿಗೆ ಹೊಡೆಯುವ ಕಾರ್ಯಕ್ರಮ, ಇನ್ನು ಹತ್ತಾರು ಕಾರ್ಯಕ್ರಮಗಳು ನಡೆದವು ದಿನಾಂಕ 7-4-2025 ರಂದು ಗರುಡವಾಹನ ಮೆರವಣಿಗೆ ಮೂಲಕ ಬೆಳಗಿನ ಜಾವ ಹಲವಾರು ಕಲಾತಂಡಗಳ ಪ್ರದರ್ಶನ, ಕುದುರೆಗಳ ಕುಣಿತ, ತಮಟೆ ಕುಣಿತ, ಇನ್ನು ಹಲವಾರು ತಂಡಗಳಿಂದ ಬೃಹತ್ ಮೆರವಣಿಗೆ ಮೂಲಕ ದೇವಸ್ಥಾನ ಪ್ರವೇಶಿಸಲಾಯಿತು. ಹಲವಾರು ಭಜನೆ ಮಂಡಳಿಯಿಂದ ಸಂಗೀತ ಸೇವೆ ಬಹಳ ವಿಶೇಷವಾಗಿ ನೆರವೇರಿತು. ಗ್ರಾಮದ ಭಕ್ತಾದಿಗಳು ಸಾರ್ವಜನಿಕ ಪ್ರಸಾದ ಸೇವೆ ಕುಡಿಯಲು ತಂಪಾದ ಪಾಣಿಗಳು ಸೇವೆಯನ್ನು ಸಲ್ಲಿಸಿದರು, ಮುರುಗೇಂದ್ರ ಗಜಾನನ ತರುಣ ಸಂಘದಿಂದ ಅನ್ನಸಂತರ್ಪಣೆ ನೆರವೇರಿಸಿದರು ಸಾಯಂಕಾಲ ದೊಡ್ಡಪಲ್ಲಕ್ಕಿಯ ಮೆರವಣಿಗೆಯ ಮೂಲಕ 6: 30 ನಿಮಿಷ ಸುಮಾರಿಗೆ ರಥೋತ್ಸವ ದೇವಸ್ಥಾನದ ಆವರಣದಿಂದ ಪಾದಗಟ್ಟಿಯವರೆಗೆ ಬೀದಿ ಉದ್ದಕ್ಕೂ ಸೇರಿದ ಜನರು “ರಾಜಾಧಿರಾಜ ಬಲ ಭೀಮರಾಜ ಬಹುಪರ”” ಎಂಬ ಘೋಷ ವಾಕ್ಯದೊಂದಿಗೆ ರಥೋತ್ಸವಸಾಗಿತು. ಗ್ರಾಮದ ಭಕ್ತಾದಿಗಳು ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಬೇರೆ ರಾಜ್ಯದಿಂದ ಬಂದ ಭಕ್ತಾದಿಗಳು, ವಿವಿಧ ಜಿಲ್ಲೆಯಿಂದ ಆಗಮಿಸಿದ ಭಕ್ತಾದಿಗಳು ಶ್ರೀ ಹನುಮಾನ್ ಜಾತ್ರೆಯನ್ನು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಭಕ್ತಿಯನ್ನು ಅರ್ಪಿಸಿದರು ದವನದ ಹುಣ್ಣಿಮೆಯಾದ ದಿನ ಊರಿನ ಸಾರ್ವಜನಿಕರು ಎಲ್ಲರೂ ಸೇರಿಕೊಂಡು ಬಾಜಾ ಭಜಂತ್ರಿ ಸಮೇತವಾಗಿ ಪಲ್ಲಕ್ಕಿಯ ಉತ್ಸವದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ರಾತ್ರಿ 7:00 ಸುಮಾರಿಗೆ ರಥೋತ್ಸವದ ಕಳಸ ವಿಸರ್ಜನೆಯನ್ನು ಮಾಡಲಾಯಿತುಈ ಜಾತ್ರೆಯನೇತೃತ್ವವನ್ನು ದೇವಸ್ಥಾನದ ಸಮಿತಿಯವರು, ಗ್ರಾಮದ ಮುಖಂಡರು, ಗ್ರಾಮದ ಯುವ ತರುಣ ಸಂಘದವರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಅಧ್ಯಕ್ಷರು/ಸದಸ್ಯರು,ಹಾಗೂ ಸಿಬ್ಬಂದಿ ವರ್ಗದವರು ವಹಿಸಿಕೊಂಡಿದ್ದರು.
ವರದಿ :ಸಿದ್ದರಾಮ ಎಂ ಬೇವಿನಮಟ್ಟಿ ಕೊರವಾರ.
