ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ತುರನೂರು ಗ್ರಾಮದ ಹೊರವಲಯದ ಬಿರ ಸಿದ್ದೇಶ್ವರ ದೇವಸ್ಥಾನದಲ್ಲಿ ಕುರಿಗಾರರ ಸಹಕಾರ ಸಂಘದ ಸಭೆ ನಡೆಸಲಾಯಿತು, ಸಭೆಯಲ್ಲಿ ಕುರಿಗಾರರಿಗೆ ಅರಣ್ಯ ಇಲಾಖೆ ಅವರಿಂದ ಕುರಿಕಳ್ಳರಿಂದ ಆಗುವ ತೊಂದರೆಗಳನ್ನು ಗಮಣಿ ಸರಕಾರದವರು ನಮಗೆ ಬೆಂಬಲ ಕೊಡುತ್ತಿಲ್ಲ, ಅನೇಕ ಜಾತಿಯ ನಿಗಮದ ಯೋಜನೆಗಳ ಮಾಡಿ ಅವರಿಗೆ ಸಾಕಷ್ಟು ಅನುದಾನ ಮೀಸಲಾತಿ ಕೊಡುತ್ತಾರೆ, ಆದರೆ ಗುಡ್ಡಗಾಡದಲ್ಲಿ ಚಳಿ ಮಳೆ ಎನ್ನದೆ ಕುರಿ ಕಾಯುವ ಕುರಿಗಾರರಿಗೆ ಯಾವುದೇ ಅನುದಾನ ಕೊಡುತ್ತಿಲ್ಲ ಒಂದು ಒಳ್ಳೆ ಯೋಜನೆಗಳು ಸಹ ಮಾಡಿಲ್ಲ, ಕುರುಗಾರರಿಗೆ ವಿಷಾದನೆಯ ಸಂಗತಿಯಾಗಿದೆ, ಈಗ ಸಂತೋಷದ ವಿಷಯವೇನೆಂದರೆ, ಬಾದಾಮಿ ತಾಲೂಕಿನ ಕುರುಗಾಯನನ್ನು ಕೊಲೆ ಮಾಡಿದ ಕುರಿ ಕಳ್ಳತನ ಮಾಡಿದ ನಂತರ ಕುರಿಗಾರರಿಗೆ ಪೊಲೀಸ್ ಇಲಾಖೆಯಿಂದ ಗನ್ ತರಬೇತಿ ಕೊಡುತ್ತಿದ್ದಾರೆ ಅದು ನಮ್ಮ ಕರ್ನಾಟಕ ಎಲ್ಲಾ ಕುರಿಗಾರರಿಗೂ ಆಗಬೇಕೆಂದು ನಮ್ಮ ಉದ್ದೇಶ ಎಂದು, ಕುರಿ ಸಾಕಾಣಿಕೆ ನಿಗಮ ಮಂಡಳಿ ರಾಜ್ಯ ಸದಸ್ಯರಾದ ಶ್ರೀ ಕಾಶಿನಾಥ್ ಹುಡೆದ ವರು ಮತ್ತು ತಾಲೂಕಾ ಅಧ್ಯಕ್ಷರಾದ ಪಡೆಯಪ್ಪ ಕ್ವಾರಿ ಮಾತನಾಡಿದರು,ಈ ಸಭೆಯಲ್ಲಿ ತುರನೂರು ಗ್ರಾಮದ ಕುರಿ ಗಾಯನ ಮಗಳಾದ ಪ್ರೇಮಾ ನಿಂಗಪ್ಪ ಗಡದಾರ್. ಎಂಬ ವಿದ್ಯಾರ್ಥಿನಿ ಪಿಯುಸಿ ಪರೀಕ್ಷೆಯಲ್ಲಿ ಶೆಕಡಾ 77 ಅಂಕ ಪಡೆದ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ತೆರಗಡೆ ಯಾಗಿದ್ದು ಹೆಮ್ಮೆಯ ವಿಷಯ ಎಂದರು, ಇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಕುರಿ ಗಾರರ ಸಂಘದ ಸದಸ್ಯರ ಸಹ ಬಾಗಿತ್ವದಲ್ಲಿ ವಿದ್ಯಾರ್ಥಿನಿಗೆ ಸನ್ಮಾನ ಮಾಡಲಾಯಿತು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ