ಕಾಳಗಿ:ಧಾರ್ಮಿಕ ದತ್ತಿ ಇಲಾಖೆವ್ಯಾಪ್ತಿಗೆ ಬರುವ ತಾಲೂಕಿನ ಸುಕ್ಷೇತ್ರ ರೇವಗ್ಗಿ(ರಟಕಲ್) ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಗೋ..ಶಾಲೆಯಲ್ಲಿರುವ ನೂರಾರು ಗೋವುಗಳು ತಿನ್ನಲು ಮೇವು, ಕುಡಿಯಲು ನೀರು ಹಾಗೂ ಸೂಕ್ತವಾದ ಉಪಚಾರವಿಲ್ಲದೆ ನರಳಿ-ನರಳಿ ಸಾವನ್ನಪ್ಪುತ್ತಿದ್ದರೂ ಕೂಡಾ ಸಂಬಂಧಪಟ್ಟ ಯಾವ ಅಧೀಕಾರಿಗಳು ಸಹ ಇತ್ತಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಈ ಭಾಗದ ಬಹು ದೋಡ್ಡ ಧಾರ್ಮಿಕ ಕ್ಷೇತ್ರವಾಗಿರುವ ಗುಡ್ಡದ ಗುರುವಿನ ಆಶ್ರಯ ತಾಣದಲ್ಲಿ ಅಪಾರ ಭಕ್ತರ ಶಕ್ತಿಯ ಪ್ರತೀಕವಾಗಿ ಅನ್ನ ದಾಸೋಹ, ಕುಡಿಯುವ ನೀರು, ಮದುವೆ-ಮುಂಜಿಗಳಿಗಾಗಿ ಸುಂದರವಾದ ಕಲ್ಯಾಣ ಮಂಟಪಗಳು ಸೇರಿ ಅಪಾರವಾದ ನೈಸರ್ಗಿಕ ಸಂಪತ್ತುಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸೂಕ್ತವಾದ ಆಡಳಿತ ವರ್ಗದ ಕೊರತೆಯಿಂದಾಗಿ ಇರುವ ಸಂಪತ್ತನ್ನು ಆದಷ್ಟು ಕೊಳ್ಳೆ ಹೊಡೆಯುವ ವೇದಿಕೆಯಾಗಿದೆ ಎಂದು ಇಲ್ಲಿಯ ಸಾರ್ವಜನಿಕರು ಆರೋಪಿಸಿದ್ದಾರೆ. ಜಮೀನಿದ್ದರೂ ಜಾನುವಾರಗಳ ರಕ್ಷಣೆಯಿಲ್ಲ: ದೇವಸ್ಥಾನಕ್ಕೆ ಸಂಬಂಧಿಸಿದ 28ಎಕರೆ ಜಮೀನಿದ್ದರೂ ಕೂಡಾ ಇಲ್ಲಿಯ ಜಾನುವಾರುಗಳಿಗೆ ರಕ್ಷಣೆ ಇಲ್ಲದಾಗಿದೆ.
ಸೂಕ್ತ ಉಪಚಾರವಿಲ್ಲದ ಜಾನುವಾರುಗಳು ಪ್ರತಿನಿತ್ಯ ನರಳಿ-ನರಳಿ ಪ್ರಾಣ ಬಿಡುತ್ತಿವೆ.
ಗೋವುಗಳ ಜೀವಕ್ಕೆ ಬೆಲೆಯಿಲ್ಲದಾಗಿದೆ.
ಗೋವುಗಳ ಪಾಲನೆ-ಪೋಷಣೆ ಇಲ್ಲದೆ ಜೀವಂತವಾಗಿರುವ ಗೋವುಗಳನ್ನು ನಾಯಿ-ನರಿಗಳು ಹರಿದು ತಿನ್ನುತ್ತಿರುವುದನ್ನು ನೋಡಿದರೆ ನೋಡುಗರ ಕರುಳು ಹಿಂಡುವಂತಹ ಘೋರ ದೃಶ್ಯ ನಿರ್ಮಾಣವಾಗಿದೆ. ಗೋವುಗಳ ಮರಣ ಹೋಮಕ್ಕಾಗಿ ಗುಂಡಿಗಳ ನಿರ್ಮಾಣ:ಪ್ರತಿನಿತ್ಯ ಸಾವನ್ನಪ್ಪುತ್ತಿರುವ ಗೋವುಗಳಿಗಾಗಿ ಮುಂಚಿತವಾಗಿಯೇ ತಗ್ಗು-ಗುಂಡಿಗಳನ್ನು ಹೊಡೆಯಿಸುತ್ತಿರುವುದು ಬಹುವಿಚಿತ್ರವಾಗಿದೆ.
ಕ್ಷಿಣಿಸುತ್ತಿರುವ ಗೋವುಗಳ ಸಂಖ್ಯೆ:ಕಳೆದೆರಡು ವರ್ಷಗಳ ಹಿಂದೆ 350ಗೋವುಗಳಿದ್ದವು. ದೇವಸ್ಥಾನಕ್ಕೆ ಪ್ರತಿನಿತ್ಯ 2ರಿಂದ 3 ಗೋವುಗಳು ಬಿಟ್ಟು ಹೋಗುತ್ತಾರೆ.
ವಿಶೇಷವಾಗಿ ಪ್ರತಿವರ್ಷ ಮಾರ್ಚ್ ತಿಂಗಳಿಂದ ಜೂನ್ ತಿಂಗಳವರೆಗೆ ಪ್ರತಿನಿತ್ಯ 15 ರಿಂದ 20 ಗೋವುಗಳನ್ನು ಬಿಡುವ ಭಕ್ತರು ಈ ದೇವಸ್ಥಾನಕ್ಕೆ ಇದ್ದಾರೆ.
ಇಷ್ಠಿದ್ದು, ಗೋವುಗಳ ಸಂಖ್ಯೆ ಯಥಾಸ್ಥಿತಿ ಕಾಣುತ್ತರುವುದು ಭಕ್ತರಲ್ಲಿ ಸಂಶಯವನ್ನುಂಟುಮಾಡಿದೆ.ದೇವಸ್ಥಾನದ ವಾರ್ಷಿಕ ಆದಾಯ ಎರಡು ಕೋಟಿ: ಈ ದೇವಸ್ಥಾನದ ವಾರ್ಷಿಕ ಆದಾಯ ಎರಡು ಕೋಟಿಯಷ್ಠಿದ್ದರೂ ಕೂಡ ಅಭಿವೃದ್ಧಿಯಾಗದಿರುವುದು ಏಕೆ ಎನ್ನುವ ಪ್ರಶ್ನೆ ಸದ್ಭಕ್ತರದ್ದಾಗಿದೆ. 3000ಟ್ರೀಪ್ ಗೊಬ್ಬರ ಮಾರಾಟ: ದೇವಸ್ಥಾನದ 28ಎಕರೆ ಜಮೀನಿಗೆ ಗೋವುಗಳ ಗೊಬ್ಬರ ಹಾಕದೆ ಬೆರೆಯವರಿಗೆ ಮಾರಾಟ ಮಾಡುತ್ತಿರುವುದರಿಂದ ದೇವಸ್ಥಾನದ ಭೂಮಿ ಬರಡಾಗಿ ಗೂವುಗಳಿಗೆ ಮೇವು ಇಲ್ಲದ ಪರಿಸ್ಥಿತಿಯುಂಟಾಗಿದೆ.
ಸಧ್ಯದ ಪರಿಸ್ಥಿತಿಯಲ್ಲಿ 28ಎಕರೆ ಜಮೀನು ಗೋವುಗಳಿಗೆ ಹೂತುಹಾಕಲು ಮಾತ್ರ ಸೀಮಿತವಾಗಿದೆ.
ಜಮೀನಿನ ಎಲ್ಲಂದರಲ್ಲಿ ಗೋವುಗಳ ಎಲುವಿನ ಹಂದರವಾಗಿದೆ.
14 ಜನರ ಹಾಜರಿ 4 ಜನರ ಸೇವೆ: ಹೆಸರಿಗೆ ಮಾತ್ರ 14ಜನ ಗೋಪಾಲಕರು ಹಾಜರಿ ಮಾತ್ರ 4ಜನರಿದ್ದು,ಮುಂಜಾನೆ 8ರಿಂದ 10ರ ವರೆಗೆ ಅರ್ಚಕರು, ಮಧ್ಯಾಹ್ನ 3 ರಿಂದ 5ರ ವತರಗೆ ಗೋಪಾಕರು ಮೇಯಿಸುತ್ತಾರೆ.
ರಾತ್ರಿವೇಳೆ ಯಾವ ಸಿಬ್ಬಂದಿ ಗಳೂ ಇರುವುದಿಲ್ಲ. ಶಡ್ಡಿದ್ದರೂ ಕೂಡ ಬಿಸಿಲಿನಲ್ಲಿರುವ ಗೋವುಗಳಿಗೆ ದಿಕ್ಕಿಲ್ಲದವರಂತಾಗಿದೆ.
ನೋಡುಗರಿಗಾಗಿ ಕಾದಿಟ್ಟ ಕಣಕಿ: ಸುಮಾರು ನಾಲ್ಕು ವರ್ಷಗಳಿಂದಿಟ್ಟಿರುವ ಹಳೆಯ ಕಣಕಿಯನ್ನೆ ಗೋ..ಶಾಲೆಗೆ ಭೇಟಿ ನೀಡುವ ಅಧೀಕಾರಿಗಳಿಗೆ ತೋರಿಸುವ ರೂಢಿಮಾಡಿಕೊಂಡಿರುವ ಇಲ್ಲಿಯ ಆಡಳಿತ ವ್ಯವಸ್ಥೆ ಯನ್ನು ನೋಡಿ ಸಾರ್ವಜನಿಕರಿಗೆ ತಲೆ ನೋವಾಗಿದೆ.
ದನಗಳು ತಿನ್ನದ ಹೊಟ್ಟು ಸಂಗ್ರಹ: ದನಗಳು ಮುಟ್ಟದೆ ಇರುವ ಸೋಯಾ ಹಾಗೂ ತೊಗರಿಯ ಹೊಟ್ಟನ್ನು ಭಕ್ತರಿಂದ ಸಂಗ್ರಹಿಸಿ ಮೇವು ಖರಿದಿ ಮಾಡಿರುವ ಲೆಕ್ಕ ತೋರಿಸಿತ್ತಿರುವುದೊಂದು ಹಗರಣವೇ ಸರಿ ಎಂದು ಭಕ್ತರು ವಿಷಾಧ ವ್ಯಕ್ತಪಡಿಸಿದ್ದಾರೆ.
ಹೊಟ್ಟಿನಲ್ಲಿ ಹೂತಿಟ್ಟ ಗೋವಿನ ಗಬ್ಬು: ನಾಯಿ-ನರಿಗಳು ತಿಂದಿರುವ ಗೋವುಗಳನ್ನು ಗಬ್ಬುವಾಸನೆ ಬರುತ್ತಿರುವುದನ್ನು ನೋಡಿದ ಇಲ್ಲಿಯ ಭಕ್ತರು ದೇವಸ್ಥಾನದ ಆಡಳಿತ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಗೋವುಗಳಿಗೆ ಸಂರಕ್ಷಣೆ ಇಲ್ಲದೆ ಸಾವನ್ನಪ್ಪುತ್ತಿರುವ ವಿಚಾರ ಪಶುಪಾಲನಾ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆ ಕಲಬುರಗಿಯ ಉಪನಿರ್ದೇಶಕರಿಗೆ ಪರಿ-ಪರಿಯಾಗಿ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ಮುಂದೆ ಇದೇ ಪ್ರಕಾರ ಗೋವುಗಳ ಮರಣಹೋಮ ನಡೆದರೆ ಉಗ್ರಹೋರಾಟಕ್ಕಿಳಿಯಬೇಕಾಗುತ್ತದೆ.
-ರಾಜಕುಮಾರ ಚೌವ್ಹಾಣ ಕಲಬುರಗಿ ಜಿಲ್ಲಾಧ್ಯಕ್ಷರು, ಭೀಮಪುತ್ರಿ ಬ್ರಿಗೇಡ್
ದೇವಸ್ಥಾನದ ಗೋಶಾಲೆಯಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ.
ಗೋವುಗಳ ರಕ್ಷಕರೇ ಭಕ್ಷಕರಾಗಿದ್ದಾರೆ.
ದೇವಸ್ಥಾನದ ಆಡಳಿತಕ್ಕೆ ಗೋವುಗಳ ಶಾಪ ತಟ್ಟದೇ ಇರದು.
ಪ್ರತಿ ವರ್ಷ ಭಕ್ತರು ಬಿಡುವ ಗೋವುಗಳು ಕಾಣೆಯಾಗುತ್ತಿರುವುದನ್ನು ನೋಡಿದರೆ ತುಂಬಾ ಆಶ್ಚರ್ಯ ವಾಗುತ್ತದೆ.
-ಸಿದ್ದು ಗೊಣಗಿ ಸಮಾಜ ಸೇವಕ
ಗೋವುಗಳಿಗೆ ಸೂಕ್ತ ರಕ್ಷಣೆ ನೀಡಿ ಅವುಗಳ ಪಾಲನೆ-ಪೋಷಣೆ ಕ್ರಮಬದ್ಧವಾಗಿ ನಡೆಯಬೇಕು.
ದೇವಸ್ಥಾನದ ಹಣ ದುರ್ಬಳಕೆ ಯಾಗದೆ ಸದ್ಬಳಕೆಯಾಗಲಿ
-ಸತೀಷ ಹೋಸ್ಸಳ್ಳಿ ದೇವಸ್ಥಾನ ಭಕ್ತ