ಬಳ್ಳಾರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್. ಸಿದ್ದಪ್ಪ ನೇತೃತ್ವದಲ್ಲಿ ದೆಹಲಿ ವಿಧಾನಸಭಾ ಬಿಜೆಪಿ ಚುನಾವಣೆಯ ವಿಜಯೋತ್ಸವವನ್ನು ತಂದುಕೊಟ್ಟ ಪಕ್ಷದ ಹಿರಿಯ ಮುಖಂಡರಿಗೂ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರು ಮತ ಬಾಂಧವರಿಗೂ ಅಭಿನಂದನೆಗಳನ್ನು ತಿಳಿಸುವ ಮೂಲಕ ಸಿರುಗುಪ್ಪ ನಗರದ ಗಾಂಧಿ ಸರ್ಕಲ್ ನಲ್ಲಿ ಕಾರ್ಯಕರ್ತರೊಂದಿಗೆ ಸಿಹಿ ಹಂಚುತ್ತ ಪಟಾಕಿಗಳನ್ನು ಹಚ್ಚುವ ಮೂಲಕ ಸಂಭ್ರಮವನ್ನು ಆಚರಿಸಲಾಗಿತ್ತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸ್ವಾಮಿ, ಜಿಲ್ಲಾ ಯುವ ಮೋರ್ಚ್ ಬಿಜೆಪಿ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ, ಹಿರಿಯರಾದ ವೀರಣ್ಣ ಗೌಡ, ಚಾಗಿಸುಬ್ಬಯ್ಯ ನಗರಸಭೆಯ ಸದಸ್ಯರಾದ ನಟರಾಜ,ಮೋಹನ್ ರೆಡ್ಡಿ ಮತ್ತು ವಿಕ್ರಂ ಜೈನ್ ಮುಖಂಡರುಗಳಾದ ಅಂಜಿ,ಗಾದಿಲಿಂಗ,ಮಲ್ಲಿಕಾರ್ಜುನ ಕೃಷ್ಣಪ್ಪ, ನೀಲಕಂಠ, ವೀರೇಶ, ಕನಕೇಶ,ನಲ್ಲ ರೆಡ್ಡಿ,ವಿಜಯ್ ಫಕೀರಪ್ಪ,ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಶೇಖರ್ ಹೆಚ್