ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಕುಮಟಾದ ಗೋವರ್ಧನ ಹೋಟೆಲ್ ನಿಂದ ನೋಟ್ ಬುಕ್ ವಿತರಣೆ
ಕುಮಟಾ : ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಕುಮಟಾದ ಪ್ರತಿಷ್ಠಿತ ಗೋವರ್ಧನ್ ಹೋಟೆಲ್ ಮಾಲಿಕರಾದ ಗಣೇಶ ನಾರಾಯಣ ನಾಯಕರವರ ಪ್ರಾಯೋಜಕತ್ವದಲ್ಲಿನ ಉಚಿತ ನೋಟ್ ಬುಕ್ ಗಳನ್ನು ಶಾಲೆಯ ಪತ್ರಾಂಕಿತ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕರವರು ವಿತರಿಸಿದರು.
ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವ ಸದುದ್ದೇಶದಿಂದ ತಮ್ಮ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಿಸಿದ ಗಣೇಶ ನಾಯಕರವರಿಗೆ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಸರಸ್ವತಿ ನಾಯಕ, ಸಿಬ್ಬಂದಿ ಪುನೀತಕುಮಾರ್, ಸಂಸ್ಕೃತ ವಿದ್ಯಾರ್ಥಿಗಳಾದ ವಿಘ್ನೇಶ ಹರಿಕಾಂತ, ನಾಗಶ್ರೀ ಹಳ್ಳೇರ್, ನಂದನ ನಾಯಕ, ಸಂಜನಾ ನಾಯ್ಕ, ಜೀವನ ಪಟಗಾರ, ಪ್ರಜ್ವಲ ಹರಿಕಾಂತ, ಶಿವರಾಜ ಗಾಂವ್ಕರ್, ರಮ್ಯಾ ಪಟಗಾರ, ಸಂಧ್ಯಾ ಹಳ್ಳೇರ್, ಗೌತಮಿ ಹರಿಕಾಂತ, ಮಲ್ಲಿಕಾ ಹಳ್ಳೇರ್, ಸಂಧ್ಯಾ ಹಳ್ಳೇರ್, ಸಂಕೇತ ಪಟಗಾರ, ಹರ್ಷ ಹರಿಕಾಂತ್, ಚರಣ್ ಹರಿಕಾಂತ್, ಗಗನ್ ಹರಿಕಂತ್ರ, ಸುಮುಖ ಪಟಗಾರ ಹಾಗೂ ಗೌತಮಿ ಮೊದಲಾದವರಿದ್ದರು.
