ಸಿರುಗುಪ್ಪ ತಾಲೂಕಿನ ಶಿಶು ಅಭಿವೃದ್ಧಿ ಕೇಂದ್ರದ ಮೇಲ್ಚಾವಣಿ ಭಾಗದಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ಸಮ್ಮುಖದಲ್ಲಿ ಕುಂದು ಕೊರತೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಕೆಲವೊಂದು ವಿಷಯಗಳ ಕುರಿತು ಸಂಬಂಧಪಟ್ಟಂತಹ ಅಧಿಕಾರಿಗಳನ್ನು ಕರಿಸಿ ಸಮಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿರುಗುಪ್ಪ ನಗರದ ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣಗಳು ನಿರುಪಯುಕ್ತವಾಗಿದ್ದು ಇಲ್ಲಿ ಅನೈತಿಕ ವ್ಯವಹಾರಗಳು ನಿರ್ವಹಿಸುತ್ತಿರುವುದನ್ನು ತಡೆಗಟ್ಟುವ ಬಗ್ಗೆ. ಕರ್ನಾಟಕ ರಕ್ಷಣಾ ಪಡೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಡಿ ನೂರ್ ಬಾಷಾ ಅವರು ಸಾರ್ವಜನಿಕ ಕುಂದು ಕೊರತೆಗಳ ಸ್ವೀಕರಿಸಲು ಕುಳಿತಿರುವಂತಹ ಮಾನ್ಯಶ್ರೀ ತಾಲೂಕ್ ದಂಡಾಧಿಕಾರಿಗಳಾದ ನೆರಸಪ್ಪ ಸರ್ ಹಾಗೂ ತಾಲೂಕ ಪಂಚಾಯತಿ ಇ ಓ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೆ ಕೊಟ್ಟಂತಹ ಹವಾಲಗಳನ್ನು ಸ್ವೀಕರಿಸಿದ ಅವರ ಸಮ್ಮುಖದಲ್ಲಿಯೇ ಸಂಬಂಧಪಟ್ಟಂತಹ ಅಧಿಕಾರಿಗಳನ್ನು ಕರೆಯಿಸಿ ಮಾತುಕತೆಯ ಮೂಲಕ ಇಂತಹ ವಿಚಾರಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕೆಂದು ಎತ್ತರಿಸಿದರು.
ವರದಿ ಶೇಖರ್ ಹೆಚ್
