ಚಿಕ್ಕೋಡಿ :
ಒಂದು ಸಾವಿರ ವರ್ಷದ ಇತಿಹಾಸ ಹೊಂದಿರುವ ಭಗವಾನ ಆದಿನಾಥ ಮಂದಿರದಲ್ಲಿ ಪುರಾತನ ಮೂರ್ತಿಗೆ ಮಂತ್ರಪಟನದೊಂದಿಗೆ 1008 ಹಾಲಿನ ಕಲಶ, 1008 ಕಲ ಕಲಶ ಹಾಗೂ ಅನ್ಯ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ನೆರವೆರಿಸಿ ಬೆಂಗಳೂರಿನಿಂದ ತಂದಿರುವ 1008 ಕಮಲ ಪುಷ್ಪಗಳಿಂದ ಅರ್ಚನೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಹಮ್ಮಿಕೊಂಡ ಜೈನ ಸಮಾವೇಶದ ನಿಮಿತ್ಯವಾಗಿ ರಾಷ್ಟ್ರ ಸಂತ ಗುಣಧರನಂದಿ ಮುನಿಮಹರಾಜರ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಟಾಚಾರಿಗಳ ಮಂತ್ರ ಪಟ್ಟನೆಗಳ ಮೂಲಕ ಮಹಾಮಸ್ತಕಾಭಿಷೇಕ ನೆರವೇರಿತು. ಮುನಿಗಳಾದ ಶ್ರವಣನಂದಿ ಮುನಿ ಮಹರಾಜರು ತತ್ವಾರ್ಥ ನಂದಿ ಮುನಿ ಮಹರಾಜರು ಸಾನಿಧ್ಯವಹಿಸಿದ್ದರು.
ಈ ವೇಳೆ ಮಾತನಾಡಿದ ಆಚಾರ್ಯ ರಾಷ್ಟ್ರಸಂತ ಗುಣಧರನಂದಿ ಮುನಿಮಹರಾಜರು ಪೂಜೆ ವಿಧಾನ ಬಗ್ಗೆ ಮಾತನಾಡಿ ಭಗವಾನ ಆದಿನಾಥ ಮೂರ್ತಿಗೆ ಪಂಚ ನದಿಗಳಿಂದ ಜಲವನ್ನ ತಂದು 1008 ಕಳಶಗಳ ಹಾಲು 1008 ಕಮಲ ಪುಷ್ಪಗಳು ಪೂಜಾ ವಿಧಾನದಲ್ಲಿ ಬಳಕೆ ಮಾಡಿ ವಿಶ್ವದ ಶಾಂತಿಗಾಗಿ ಹಾಗೂ ಕರೊನಾ ಮಹಾ ಮಾರಿ ತಡೆಗಟ್ಟಲು ಸಹದೋಷ ಔಷದ ಬಳಸಿ ಮಹಮಸ್ತಕಾಭಿಷೇಕ ನೆರವೆರಿಸಲಾಗಿದೆ ಎಂದರು.
ವರದಿ: ಪವನಕುಮಾರ ಕೃಷ್ಣಶರ್ಮಾ
