ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಆದೇಶದ ಮೇರೆಗೆ ಎಲ್ ಕೆ ಜಿ, ಯು ಕೆ ಜಿ ತರಗತಿ ಉದ್ಘಾಟನಾ ಸಮಾರಂಭವನ್ನು ಮಾಡಲಾಯಿತು .
ಈ ಸಮಾರಂಭವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮಾನ್ ಕುಲ್ಲಚಂಡ ಪ್ರಮೋದ್ ಗಣಪತಿಯವರು ಉದ್ಘಾಟಿಸಿದರು. ಇಂದಿನ ಮಕ್ಕಳ ಶಿಕ್ಷಣದ ಕುರಿತು, ನಮ್ಮ ಗ್ರಾಮದಲ್ಲಿ ಎಲ್ಕೆಜಿ ಯುಕೆಜಿ ಪ್ರಾರಂಭಿಸುವುದು ತುಂಬಾ ಹೆಮ್ಮೆಯ ವಿಷಯ ಅದೇ ರೀತಿ ಮುಂದೆ ಇದನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗುವಂತೆ ಮಾರ್ಗದರ್ಶನ ನೀಡಿ ಮಕ್ಕಳಿಗೆ ಶುಭವನ್ನು ಕೋರಿದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀಮಾನ್ ಹೆಚ್ ಡಿ ಕುಮಾರ್ ರವರು ಮಕ್ಕಳ ಶಿಕ್ಷಣದ ಕುರಿತು ದಾಖಲಾತಿ ವಯೋಮಿತಿ, ಶಿಕ್ಷಣದ ಮಹತ್ವ ಪಠ್ಯ ಪುಸ್ತಕಗಳು ಇದರ ಬಗ್ಗೆ ಪೋಷಕರಿಗೆ ಅರಿವು ಮೂಡಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ತಿತಿಮತಿ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯರು ಆದ ಕುಮಾರಿ ಶ್ವೇತಾ ರವರು ಮಕ್ಕಳಿಗೆ ಶುಭಕೋರುತ್ತಾ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಶ್ರೀಮತಿ ಮಂಜುಳಾ, ಶ್ರೀಮಾನ್ ಅಬ್ಝಲ್ ಸ್ತ್ರೀಶಕ್ತಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವರಲಕ್ಷ್ಮಿ ಡಾಕ್ಟರ್ ಶಮಿತಾ, ಎಲ್ಲಾ ಆಶಾ ಕಾರ್ಯಕರ್ತೆಯರು ಚಿತ್ರ, ಸುಧಾ, ಗೀತಾ, ದಮಯಂತಿ, ಎಲ್ಲಾ ಅಂಗನವಾಡಿ ಶಿಕ್ಷಕಿಯರಾದ ಲತಾ, ದೇವಕಿ, ಸಂಧ್ಯಾ, ಪುಷ್ಪ, ಸುಮತಿ, ಸಹಾಯಕಿ ಯಮುನಾ ಪೋಷಕ ವೃಂದದವರು ಊರಿನ ಗ್ರಾಮಸ್ಥರು ಪುಟಾಣಿ ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ, ಎಲ್ಲರೂ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಲತಾ ಎಲ್ಲರನ್ನೂ ಸ್ವಾಗತಿಸಿ ಎಲ್ಲರನ್ನು ವಂದಿಸಿದರು.
