ಸಿರುಗುಪ್ಪ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯ 10:30 ಬೆಳ್ಳಿಗೆ ಆದ್ರು ಕೂಡ ವೈದ್ಯರು ಇಲ್ಲ ಖಾಲಿ ಖಾಲಿ ಕುರ್ಚಿ,ವೈದ್ಯರಿಲ್ಲದೆ ಜನಸಾಮಾನ್ಯರು, ರೋಗಿಗಳು ಪರದಾಟ.
ಭತ್ತದ ನಾಡು ಎಂದು ಹೆಸರು ವಾಸಿ ಯಾಗಿರುವ ಸಿರುಗುಪ್ಪ ತಾಲೂಕಿನಲ್ಲಿ ಸೊಳ್ಳೆಗಳು ಜಾಸ್ತಿ ಆಗಿ ಡೆಂಗು ಮಲೇರಿಯಾ ಜ್ವರ ಇನ್ನೊಂದು ರೋಗ ಅಕ್ಕಿ ಜ್ವರ ಬಂದಿದೆ ಎಂದು ಜನ ಸಾಮನ್ಯರು ಭಯಬೀತರಾಗಿದ್ದಾರೆ.

ತಾಲೂಕಿನಲ್ಲಿ ಆಸ್ಪತ್ರೆಯಲ್ಲಿ ಹೆಸರಿಗಷ್ಟೇ ವೈದ್ಯರ ನಾಮಫಲಕ ಸರಿಯಾಗಿ ಸಮಯಕ್ಕೆ ವೈದ್ಯರಿಲ್ಲದೆ ಸಾರ್ವಜನಿಕ ತಾಲೂಕು 100 ಹಾಸಿಗೆ ಆಸ್ಪತ್ರೆಯಾಗಿದ್ದು ಆರೋಗ್ಯ ಸಿಬ್ಬಂದಿಗಳು ಇಲ್ಲದೆ ಜನಸಾಮಾನ್ಯರು ಪರದಾಡುತ್ತಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಆಸ್ಪತ್ರೆ ಕಡೆ ಗಮನ ಹರಿಸಬೇಕು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಸ್ಪತ್ರೆಗಳಿದ್ದು ಕೂಡ ವೈದ್ಯರಿಲ್ಲದೆ ಕಾರಣ ತಾಲೂಕಿನ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವಂತ ಪರಿಸ್ಥಿತಿ ಉಂಟಾಗಿದೆ.
ವರದಿ.ಶೇಖರ್ ಹೆಚ್.