ಕುಮಟಾ :-ಕುಮಟಾ ತಾಲೂಕಿನ ಧಾರೇಶ್ವರದ ಜನತಾ ವಿದ್ಯಾಲಯದಲ್ಲಿ ಡಾ ಎವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯ ದ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ
ಅವರು ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಬದುಕು ಯಾಂತ್ರಿಕವಾಗಿದ್ದು ಹಣ ಆಸ್ತಿ ಅಂತಸ್ತಿನ ಗಳಿಕೆಯ ಹಿಂದೆ ಬಿದ್ದಿರುವ ಮನುಷ್ಯ ಸಮಾಜದ ಕುರಿತು ಚಿಂತಿಸುವ ಮನೋಭಾವ ಕಡಿಮೆಯಾಗುತ್ತಿದೆ ಎನ್ಎಸ್ಎಸ್ ನಂತಹ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶ ಸದೃಢವಾಗಲು ಸಮಾಜದ ಸಹಕಾರ ಅಗತ್ಯವಿದ್ದು ಉತ್ತಮ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹೆಚ್ಚು ಉತ್ಸುಕಾರಾಗಿ ಇಂತಹ ಸಂಘಟನೆಗಳ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜದ ಸದೃಢ ದೇಶದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೆನರಾ ಕಾಲೇಜು ಸೊಸೈಟಿ ಕುಮಟಾದ ಕಾರ್ಯಧ್ಯಕ್ಷರಾದ ಹನುಮಂತ ಕೆ ಶಾನಭಾಗ ಅಭಿಪ್ರಾಯಪಟ್ಟರು.
ಅವರು ಇಂದಿನ ಶಿಕ್ಷಣದಲ್ಲಿ ನೈತಿಕತೆ, ಸಂಸ್ಕೃತಿ ಸಾಮಾಜಿಕ ಕಳಕಳಿ ವಿದ್ಯಾರ್ಥಿ ದೆಸೆಯಿಂದಲೇ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು.

ವಿದ್ಯಾರ್ಥಿಗಳು ಪಠ್ಯ ದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಈ ಮೂಲಕ ತಮ್ಮ ಸರ್ವತೋಮುಖ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಸ್ ಟಿ ನಾಯ್ಕ ಮಾತನಾಡಿ ಎನ್ಎಸ್ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಇಮ್ಮಡಿಯಾಗುವ ಜೊತೆಯಲ್ಲಿ ಶ್ರಮ ಸಂಸ್ಕೃತಿ ಜೀವನ ಜ್ಞಾನ ಬೆಳೆಸಲು ತುಂಬಾ ಸಹಕಾರಿಯಾಗಿದೆ ಇಂಥ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ನುಡಿದರು ಪ್ರಾಚಾರ್ಯೆ ಡಾ ರೇವತಿ ಆರ್ ನಾಯ್ಕಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಗೋಪಿ ಬಜಂತ್ರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯರಾದ ಜಗದೀಶ್ ಗುನಗ ಯೂನಿಯನ್ ಕಾರ್ಯಧ್ಯಕ್ಷರಾದ ಡಾ ಅರವಿಂದ ನಾಯಕ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ ಮಂಜುನಾಥ ವೆರನೇಕರ್ ಎನ್ ಎಸ್ ಎಸ್ ಕಾರ್ಯದರ್ಶಿಗಳಾದ ಶಿವಕುಮಾರ್ ನಾಯಕ ಅಶ್ವಿನಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮಾರ್ಚ್ ಮೂರರಿಂದ ಒಂಬತ್ತು ರವರೆಗೆ ಹಮ್ಮಿಕೊಂಡಿರುವ ಈ ಶೀಘ್ರದಲ್ಲಿ ಪ್ರತಿದಿನವೂ ಶ್ರಮದಾನ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಉಚಿತ ಆರೋಗ್ಯ ಶಿಬಿರ ವಿವಿಧ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ವಿಶೇಷ ಮನರಂಜನ ಕಾರ್ಯಕ್ರಮ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು