ಹುಣಸೂರು ನಿಯಮಾವಳಿಗಳನ್ನ ಉಲ್ಲಂಘಿಸಿ ಗ್ರಾಮಗಳಿಗೆ ತೆರಳಿ ಬಯೋಮೆಟ್ರಿಕ್ ಪಡೆಯುತ್ತಿರುವ ನ್ಯಾಯಬೆಲೆ ಅಂಗಡಿಯ ಭದ್ರತಾ ಠೇವಣಿಯನ್ನ ಆಹಾರ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಛಾಟಿ ಏಟು ಕೊಟ್ಟಿದ್ದಾರೆ.ಮತ್ತೊಮ್ಮೆ ಇಂತಹ ಉಲ್ಲಂಘನೆ ಮಾಡಬಾರದೆಂದು ಎಚ್ಚರಿಕೆ ನೀಡಿ ಮತ್ತೆ 10 ಸಾವಿರ ರೂ ಠೇವಣಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.ಇದು Tv23 ವರದಿಯ ಫಲಶೃತಿ.

ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು ಬಯೋಮೆಟ್ರಿಕ್ ವ್ಯವಸ್ಥೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ Tv23 ನಲ್ಲಿ ದೃಶ್ಯಗಳ ಸಮೇತ ವರದಿ ಮಾಡಲಾಗಿತ್ತು.ಈ ಬಗ್ಗೆ ಆಹಾರ ಇಲಾಖೆಗೆ ಲಿಖಿತ ದೂರನ್ನೂ ಸಹ ನೀಡಲಾಗಿತ್ತು.ಈ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರವರು ಸರ್ವರ್ ಸಮಸ್ಯೆ ಇರುವುದರಿಂದ ಮಾನವೀಯತೆ ದೃಷ್ಟಿಯಿಂದ ಗ್ರಾಮಗಳಿಗೆ ತೆರಳಿ ಬಯೋ ಪಡೆದಿದ್ದಾರೆ.ಇಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ವರದಿ ನೀಡಿ ನ್ಯಾಯಬೆಲೆ ಅಂಗಡಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.ಆದ್ರೆ ತಹಸೀಲ್ದಾರ್ ವರದಿಯೇ ಹೇಳುವಂತೆ ಗ್ರಾಮಗಳಿಗೆ ತೆರಳಿ ಬಯೋ ಮೆಟ್ರಿಕ್ ಪಡೆದಿರುವುದು ಸಾಬೀತಾಗಿದೆ.ಇದನ್ನೇ ಮನಗಂಡ ಆಹಾರ ಇಲಾಖೆ ಅಧಿಕಾರಿ ಕುಮುದ ರವರು ಭದ್ರತಾ ಠೇವಣಿಯನ್ನ ಮುಟ್ಟುಗೋಲು ಹಾಕಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಮತ್ತೊಂದು ವಿಚಾರ ಪ್ರಸ್ತಾಪ ಮಾಡುವುದೇನೆಂದರೆ ಸರ್ವರ್ ಪ್ರಾಬ್ಲಂ ಇದ್ದಲ್ಲಿ ಕೇಂದ್ರವನ್ನ ಮುಚ್ಚಿ ಸರ್ವರ್ ಸಮಸ್ಯೆ ಇಲ್ಲದಿರುವ ಸ್ಥಳಕ್ಕೆ ಬದಲಾಯಿಸಿ.ಪ್ರತಿ ತಿಂಗಳೂ ಸರ್ವರ್ ಪ್ರಾಬ್ಲಂ ಇರುವ ಸ್ಥಳಕ್ಕೆ ಯಾಕೆ ಕೇಂದ್ರ ತೆರೆದಿರುವಿರಿ.ಸರ್ವರ್ ಪ್ರಾಬ್ಲಂ ಇದ್ದಾಗ ಗ್ರಾಮಕ್ಕೇ ತೆರಳಿ ಬಯೋ ಪಡೆಯಬಹುದೆಂದು ಅಧಿಕೃತವಾಗಿ ಘೋಷಿಸಿ.ಇಂತಹ ಸಮಸ್ಯೆಗಳು ಅನೇಕ ನ್ಯಾಯಬೆಲೆ ಅಂಗಡಿಗಳು ಎದುರಿಸುತ್ತಿವೆ.ಅವರಿಗೊಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯವೇ…? ಈ ನ್ಯಾಯ ಬೆಲೆ ಅಂಗಡಿಗೆ ಗ್ರಾಮಕ್ಕೇ ತೆರಳಿ ಬಯೋ ಪಡೆಯಲು ಅನುಮತಿ ನೀಡಿದವರು ಯಾರು…? ಮೇಲ್ನೋಟಕ್ಕೆ ಇಲ್ಲಿ ಪಡಿತರ ದುರುಪಯೋಗವಾಗುತ್ತಿರುವ ಬಗ್ಗೆ ಅನುಮಾನ ಬರುವುದಿಲ್ಲವೇ..? ಕೆಲವು ಗ್ರಾಮಸ್ಥರ ಹೇಳಿಕೆ ಮೇರೆಗೆ ತಹಸೀಲ್ದಾರ್ ಇಂತಹ ವರದಿ ನೀಡುವುದು ಯಾವ ನ್ಯಾಯ…? ತಹಸೀಲ್ದಾರ್ ಗೆ ನ್ಯಾಯಬೆಲೆ ಅಂಗಡಿಯ ಕನಿಷ್ಠ ಮಾಹಿತಿಯೂ ಇಲ್ಲವೇ..? ನಿಯಮಗಳನ್ನ ಗಾಳಿಗೆ ತೂರಿದ್ದರೂ ನ್ಯಾಯಬೆಲೆ ಅಂಗಡಿ ಪರ ವರದಿ ನೀಡುವುದು ಯಾವ ಊರಿನ ನ್ಯಾಯ…?ಆಹಾರ ಇಲಾಖೆ ಭದ್ರತಾ ಠೇವಣಿಯನ್ನ ಮುಟ್ಟುಗೋಲು ಹಾಕಿಕೊಂಡರೆ ಅರ್ಥವೇನು..? ಇಲ್ಲಿ ನಿಯಮಗಳನ್ನ ಉಲ್ಲಂಘಿಸಿದೆ ಎಂಬುದಲ್ಲವೇ..? ಆದಷ್ಟು ಬೇಗ ಈ ಕೇಂದ್ರಕ್ಕೆ ಬೀಗ ಜಡಿಯದಿದ್ದರೆ ಎಲ್ಲಾ ನ್ಯಾಯ ಬೆಲೆ ಅಂಗಡಿಯವರೂ ತಹಸೀಲ್ದಾ್ ನೀಡಿದ ವರದಿಯನ್ನೇ ಆಧರಿಸಿ ಗ್ರಾಮಗಳಿಗೇ ತೆರಳುತ್ತಾರೆ ಹುಷಾರ್…ಇನ್ನಾದ್ರೂ ಇಂತಹ ನ್ಯಾಯಬೆಲೆ ಅಂಗಡಿಗಳ ಅವ್ಯವಸ್ಥೆಗೆ ಆಹಾರ ಇಲಾಖೆ ಕಡಿವಾಣ ಹಾಕಲಿ…