ಕುಮಟಾ :-ತಾಲೂಕಿನ ಮಿರ್ಜಾನ್ ಅಂಬೇಡ್ಕರ್ ಭವನ ದಲ್ಲಿ ಅರಣ್ಯ ಅರಿವು ಜಾಥಾ ಆಯೋಜಿಸಲಾಗಿತ್ತು. ಅಜ್ಞಾನ ಮತ್ತು ಕಾನೂನು ತಿಳುವಳಿಕೆ ಕೊರತೆಯಿಂದ ಭೂಮಿ ಹಕ್ಕಿನಿಂದ ವಂಚಿತರಾದವರಿಗೆ ಕಾನೂನು ಅರಿವು ಮೂಡಿಸುವ ಕೆಲಸ ನಡೆಯಿತು. ಅರಣ್ಯ ವಾಸಿಗಳಿಗೆ ಕಾನೂನು ಜಾಗೃತಿ ಮೂಡಿಸುವ ಜಾಥಾ ರಾಜ್ಯದ ಎಲ್ಲಾ ಕಡೆ ನಡೆಯಲಿದೆ ಎಂದು ರಾಜ್ಯಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ್ ತಿಳಿಸಿದರು.ಕರ್ನಾಟಕದಲ್ಲಿ 294000 ಅರ್ಜಿಗಳಲ್ಲಿ ಕೇವಲ 17561 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ವಿವರಿಸಿದರು.ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ತಾಲೂಕ ಅಧ್ಯಕ್ಷ ಮಂಜುನಾಥ್ ಮರಾಠಿ ನಾಗೂರ್ವಹಿಸಿದ್ದರು.ಈ ಸಭೆಯಲ್ಲಿ ಮಹೇಂದ್ರ ನಾಯ್ಕ್,ಸೀತಾರಾಮ್ ನಾಯ್ಕ್,ಶಂಕರ್ ಗೌಡ,ಜಗದೀಶ್ ಹರಿಕಾಂತ್,ರಾಘವೇಂದ್ರ ನಾಯ್ಕ್.ಹಾಗೂ ಅನೇಕರು ಇದ್ದರು.
