ಕುಶಾಲನಗರ :ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಅರೆ ಭಾಷಾ ಗಡಿನಾಡ ಉತ್ಸವ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಿತು. ಸಮಾರಂಭವನ್ನು ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಹಳೆಯ ಸಂಸ್ಕೃತಿ ಸಂಪ್ರದಾಯಗಳು ಶಾಶ್ವತವಾಗಿ ಉಳಿಯಬೇಕು. ಇಂದು ಕಾಲ ಬದಲಾಗಿದ್ದು, ಎಲ್ಲವೂ ನಶಿಸಿ ಹೋಗುತ್ತಿವೆ ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಹಳೆಯ ಸಂಸ್ಕೃತಿ ಭಾಷೆ, ವೇಷ ಧರ್ಮಗಳನ್ನು ಎಂದಿಗೂ ಮರೆಯಬಾರದು, ಇವುಗಳೆಲ್ಲ ಸತ್ಯವಾದ ಮಾರ್ಗಗಳಾಗಿವೆ. ಈ ಭಾಗದ ಅರೆ ಭಾಷೆ ಜನಾಂಗದ ಉಳಿವಿಗಾಗಿ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ, ಅಧಿವೇಶನ ಪ್ರಾರಂಭವಾಗಲಿದ್ದು ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತಾಪಿಸಲಾಗುವುದು ಎಂದು ನೆರೆದಿದ್ದ ಎಲ್ಲಾ ಗೌಡ ಜನಾಂಗದವರಿಗೂ ಸಂದೇಶ ಸಾರಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸದಾನಂದಮಾವಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ ಜಿ ಬೋಪಯ್ಯ ಮಾಜಿ ಸಭಾಪತಿ, ಡಾಕ್ಟರ್ ಪುರುಷೋತ್ತಮ ಬಿಳಿ ಮಲೆ, ಶ್ರೀ ಸೂರ್ತಲೆ ಸೋಮಣ್ಣ, ಗುಡ್ಡೆಮನೆ ವಿಶ್ವಕುಮಾರ್, ದಂಡಿನ ಉತ್ತಯ್ಯ, ಬಾರನ ಭರತ್ ಸಮುದಾಯದ ನಿರ್ದೇಶಕರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ಹಾಜರಿದ್ದರು.
