ಹೆಬ್ಬಾಲೆ : ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಾಲೆಯ ಆರೋಗ್ಯ ನಿರೀಕ್ಷಕರು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರು ಗ್ರಾಮದಲ್ಲಿ ಬರುವ ಎಲ್ಲಾ ಹೋಟೆಲ್ ಗಳು , ಬೇಕರಿಗಳು & ಛತ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಸ್ವಚ್ಚತೆ ಬಗ್ಗೆ, ಶುದ್ಧ ಕುಡಿಯುವ ನೀರಿನ ಬಗ್ಗೆ, ಶುದ್ಧ ಆಹಾರದ ಬಗ್ಗೆ ಪರೀಶೀಲನೆ ನಡೆಸಿ ಸಾಂಕ್ರಾಮಿಕ ರೋಗಿಗಳು ಬರದಂತೆ ಎಚ್ಚರವಹಿಸಲು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿವಳಿಕೆ ಪತ್ರದ ಮೂಲಕ ಎಲ್ಲಾ ಹೋಟೆಲ್ ಗಳು, ಬೇಕರಿಗಳು ಮತ್ತು ಛತ್ರಗಳ ಮಾಲೀಕರಿಗೆ ತಿ ಳಿಸಲಾಯಿತು.ಬೇಟಿಯಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.
