ಕುಮಟಾ :- 3/1/2025 ರಂದು ಪ್ರತಿಷ್ಠಿತ ಸಂಸ್ಥೆ ಏನಿಲಿಯಪ್ ಗ್ರೂಪ್ಸ್ ಹಾಗೂನಮ್ಮ ನಾಡಿದ ಪ್ರಸಿದ್ಧ ವಾಹಿನಿಗಳಲ್ಲಿ ಒಂದಾದ ಜೀ ಕನ್ನಡ ನ್ಯೂಸ್ ಸಹಯೋಗದೊಂದಿಗೆ ಬೆಂಗಳೂರಿನ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರಭಾವ ಸಮಾರಂಭದಲ್ಲಿ ಕುಮಟಾದ ಡಾ ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಅರವಿಂದ ನಾಯಕ ಇವರಿಗೆ ರಾಜ್ಯಮಟ್ಟದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಿವ್ರತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಶ್ರೀ ಸಂತೋಷ್ ಹೆಗಡೆ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹೆಸರಾಂತ ಚಲನಚಿತ್ರ ಸಂಗೀತ ನಿರ್ದೇಶಕರಾದ ವಿ ನಾಗೇಂದ್ರ ಪ್ರಸಾದ್ ಡಾ ಮಲ್ಲಯ್ಯ ಶಾಂತಮುನಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
