ಕೆ ಆರ್ ಎಸ್ ಪಕ್ಷಕ್ಕೆ ವಿಧಿಯಿಂದ ಮತ್ತೊಮ್ಮೆ ಬರ ಸಿಡಿಲು.
ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗದಗಿನ ನೀಲಪ್ಪ ಹನುಮಂತಪ್ಪ ಕಟಗಿ ಇನ್ನಿಲ್ಲ.
04/01/2025 ರ ರಾತ್ರಿ 9 ಗಂಟೆ ಸುಮಾರಿಗೆ ಅತನ ಸ್ನೇಹಿತ ಹಾಗೂ ಪಕ್ಷದ ಕಾರ್ಯಕರ್ತ ಫಾರೂಕ್ ನ ಮದುವೆಯ ಹಿಂದಿನ ದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತನ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ 9.20 ರ ಸುಮಾರಿಗೆ ಎದುರಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರವಾಹನಕ್ಕೆ ಪರಸ್ಪರ ಡಿಕ್ಕಿಯಾಗಿ ಗಂಭೀರ ಸ್ವರೂಪದ ಅಪಘಾತವಾಗುತ್ತದೆ. ಸ್ನೇಹಿತ ಫಾರುಕ್ ಗೆ ವಿಷಯ ಗೊತ್ತಾಗಿ ಕೇವಲ ಒಂದುವರೆ ಕಿಲೋಮೀಟರ್ ದೂರದಲ್ಲಿದ್ದ ಸ್ಥಳಕ್ಕೆ ಬಂದು ಗದಗಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜ್ (ಜಿಮ್ಸ್) ಗೆ ಕರೆದುಕೊಂಡು ಬಂದರೂ ಹಲವು ನುರಿತ ವೈದ್ಯರಿಂದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ 05/01/2025 ರ ಮುಂಜಾನೆ 3.30 ರ ಸಮಯಕ್ಕೆ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿರುತ್ತಾನೆ. ನೀಲಪ್ಪ ಹನುಮಂತಪ್ಪ ಕಟಗಿಯ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತನು ನೀಡಲಿ.