ಸುರಪುರ: ವಚನ ಸಾಹಿತ್ಯಕ್ಕಾಗಿ ತಮ್ಮ ಇಡೀ ಆಸ್ತಿಯನ್ನೆಲ್ಲ ದಾಸೋಹ ಮಾಡಿ ವಚನಗಳ ಸಂರಕ್ಷಣೆ ಮಾಡಿದ ವಚನ ಸಂರಕ್ಷಕ ಡಾ.ಫ.ಗು ಹಳಕಟ್ಟಿಯವರು ಬದುಕನ್ನೆ ವಚನ ಸಾಹಿತ್ಯಕ್ಕಾಗಿ ಮೀಸಲಾಗಿಟ್ಟಿದ್ದರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಯುವ ಘಟಕದ ರಾಜ್ಯ ಸಂಚಾಲಕ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು. ಪರಿಷತ್ತಿನ ತಾಲೂಕ ಘಟಕದಿಂದ ನಗರದ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು ಹಳಕಟ್ಟಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಂದು ನಾವೆಲ್ಲರು ವಚನ ಸಾಹಿತ್ಯವನ್ನು ಓದುತ್ತೇವೆ ಎಂದರೆ ಅದಕ್ಕೆ ಡಾ.ಫ.ಗು ಹಳಕಟ್ಟಿಯವರ ಕೊಡುಗೆ ದೊಡ್ಡದಿದೆ ಎಂದರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಡಾ.ಫ.ಗು ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನೆ ಮಾರಾಟ ಮಾಡಿ ಬಂದ ಹಣದಲ್ಲಿ ವಚನಗಳ ಗ್ರಂಥವನ್ನು ಪ್ರಕಟಿಸಿದರು.ಸ್ವತಃ ಪತ್ರಕರ್ತರಾಗಿದ್ದ ಹಳಕಟ್ಟಿಯವರು ಶಿವಾನುಭವ ಎನ್ನುವ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು.ನ್ಯಾಯವಾದಿಗಳಾಗಿ ಅನೇಕರಿಗೆ ನ್ಯಾಯ ಕೊಡಿಸಿದ ಕೇರ್ತಿಯೂ ಹಳಕಟ್ಟಿಯವರಿಗೆ ಸಲ್ಲುತ್ತದೆ.ಇಂದು ಸರಕಾರವೇ ಹಳಕಟ್ಟಿಯವರ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.ಅವರ ಜೀವನ ಚರಿತ್ರೆ ಪಠ್ಯಗಳಲ್ಲಿ ಪ್ರಕಟವಾಗಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಂದಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾ.ಪ್ರ.ಕಾರ್ಯದರ್ಶಿ ಜಗದೀಶ ಪಾಟೀಲ್ ಮುಖಂಡ ಶಿವಶರಣಪ್ಪ ಹೆಡಗಿನಾಳ ಉಪಸ್ಥಿತರಿದ್ದರು.ರವಿಗೌಡ ಹೆಮನೂರ ಕಾರ್ಯಕ್ರಮ ನಿರೂಪಿಸಿದರು,ಶರಣ ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನಗಾಯನ ಮಾಡಿದರು,ಪ್ರಕಾಶ ಹೆಮ್ಮಡಗಿ ಸ್ವಾಗತಿಸಿ,ವಂದಿಸಿದರು.ಮಹಿಳೆಯರು,ಮಕ್ಕಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
