ಯಾದಗಿರಿ : ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅಡಿಯಲ್ಲಿ ಬರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲೀಕರಣ ವಿಭಾಗ ಯಾದಗಿರಿ.ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ.ಶಹಪುರ್ ಸುರಪುರ ತಾಲೂಕಗಳಿಗೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪ ವಿಭಾಗ ಮೂಲಕ ಅನುಷ್ಠಾನಗೊಂಡಿರುವ ಜೆಜೆಎಮ್ ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ನಿರ್ವಹಿಸುವಲ್ಲಿ ಅಕ್ರಮ ವ್ಯವಹಾರ ನಡೆದಿದೆ ಎಂದು ಈಗಾಗಲೇ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರು ಯಾವ ಪ್ರಯೋಜನವೂ ಕೂಡ ಆಗಿರುವುದಿಲ್ಲ ಆದರೂ ಕೂಡ ದಿನಾಂಕ 21. 03.2025 ಮಾನ್ಯ ಮುಖ್ಯ ಕಾರ್ಯವಾಹಕರುಅಧಿಕಾರಿಗಳು ಜಿಲ್ಲಾ ಪಂಚಾಯತಿ ಯಾದಗಿರಿ ಅವರಿಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡು ನಿದ್ದೆ ಮಾಡುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ ಯಾದಗಿರಿ ಜಿಲ್ಲೆಯಲ್ಲಿ ಬರುವ
ಎಲ್ಲಾ ತಾಲೂಕುಗಳ ಕಾಮಗಾರಿಗಳಿಗೆ ಇಲ್ಲಿಯವರಿಗೆ ಸ್ಥಳಕ್ಕೆ ಅಧಿಕಾರಿಗಳಾಗಲಿ ಅವರ ತಂಡದವರಾಗಲಿ ಯಾರೂ ಕೂಡ ಭೇಟಿ ನೀಡಿರುವದಿಲ್ಲ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರು ಯಾವ ಪ್ರಯೋಜನ ಆಗಿರುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 202965 ಮನೆಗಳಿಗೆ ನೀರು ಸರಬರಾಜು ಮಾಡಿದೆ ಆದರೆ ಅವರು ಕೇವಲ 695 ಮನೆಗಳಿಗೆ ಮಾತ್ರ ಕಾಮಗಾರಿಗಳನ್ನು ಮಾಡಿದೆ ಇನ್ನುಳಿದ ಕಾಮಗಾರಿಗಳು ಅಕ್ರಮ ಕಾಮಗಾ ರಿಯಗಳಾಗಿವೆ ಇಂಥ ಭ್ರಷ್ಟಾಚಾರ ಯಾವತ್ತೂ ಕೂಡ ಇಲ್ಲ ಇದರಲ್ಲಿ ಅಧಿಕಾರಿಗಳು ಕೂಡ ಶ್ಯಾಮಲಾಗಿದ್ದಾರೆ ಎಂದರು . ಬೇಲಿ ಎದ್ದು ಹೊಲ ಮೇಯಿದಂತೆ ಆಗಿದೆ ಎಂದು ಹೇಳಿದರು
ಜೆಜೆಎಮ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಖಂಡಿಸಿ ತಪ್ಪಿಸ್ತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮೇಲೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ದಿನಾಂಕ 20.06. 2025ರಂದು ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಯಾದಗಿರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವಕ್ರಮವನ್ನು ಕೈಗೊಂಡಿರುವುದಿಲ್ಲ ಇದನ್ನು ಖಂಡಿಸಿ ದಿನಾಂಕ 02.07.2025 ರಂದು RMW ವಿಭಾಗ ಕಾರ್ಯಾಲಯ ಯಾದಗಿರಿ ಅವರ ಕಾರ್ಯಾಲಯಕ್ಕೆ ದಲಿತ ಸಂಘರ್ಷ ಸಮಿತಿ ಬೀಗ ಮುದ್ರೆ ಹಾಕಿ ಪ್ರತಿಭಟನೆಯನ್ನು ಮಾಡಿದರು ಈ ಪ್ರತಿಭಟನೆಯಲ್ಲಿ ಮುಖ್ಯ ಕಾರ್ಯವ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು (ಪ್ರೊ.ಬಿ.ಕೃಷ್ಣಪ್ಪ ಬಣದ )ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ.ನಿಂಗಣ್ಣ ದೇವರಗೋನಾಲ. ನಾಗರಾಜ ಓಕಳಿ.ಸದಾಶಿವ ಬೊಮ್ಮನಹಳ್ಳಿ. ಹಣಮಂತ ಕಟ್ಟಿಮನಿ.ಎಚ್ಆರ್ ಬಡಿಗೇರ್. ರಾಮಪ್ಪ ಕೋರಿ. ಶಿವಪ್ಪ ಕಟ್ಟಿಮನಿ ನಾಗರಾಳ. ಗೋಪಾಲ ಗೋಗಿಕೇರಿ.ಹಣಮಂತ ದೊಡ್ಡಮನಿ.ನಿಂಗಣ್ಣ ಕನ್ನಳ್ಳಿ. ಅನಿಲ್ ಜಿ ಕಟ್ಟಿಮನಿ.ನಾಗು ಗೋಗಿ ಕೇರಿ.ಬಸವರಾಜ.ಮಲ್ಲಪ್ಪ ಇತರ ಜಿಲ್ಲಾ. ಮತ್ತು ಎಲ್ಲ ತಾಲ್ಲೂಕ್ ದಲಿತ ಸಂಘರ್ಷ ಸಮಿತಿಯ ಸರ್ವ ಸದಸ್ಯರು ಈ ಹೋರಾಟದಲ್ಲಿ ಭಾಗವಹಿಸಿದರು
