ಸಿಂದಗಿ: ಪೊಲೀಸರು ಕಾರ್ಯಾಚರಣೆ ನಡೆಸಿ ಬಂಟನೂರ ಗ್ರಾಮದ ಬಳಿ ಕೆರೂರ ಗ್ರಾಮದ ಹದ್ದಿ ನಲ್ಲಿರುವ ಬಸವರಾಜ ಬಾಳಪ್ಪ ಪೂಜಾರಿ ಹೊಲದಲ್ಲಿ ₹33.44 ಲಕ್ಷ ಮೌಲ್ಯದ 133 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಣಸಿನ ಗಿಡದ ಬೆಳೆಯಲ್ಲಿ ಗಾಂಜಾ ಬೆಳೆಯಲಾಗಿತ್ತು.
ಇಂಡಿ ಡಿವೈಎಸ್ಪಿ ಜಗದೀಶ ಎಚ್. ಎಸ್ ಅವರ ಮಾರ್ಗದರ್ಶನದಲ್ಲಿ ಸಿಂದಗಿ ಠಾಣೆಯ ಸಬ್ ಇನ್ಸಪೆಕ್ಟರ್ ಆರೀಫ್ ಮುಶಾಪುರಿ ನೇತೃತ್ವದಲ್ಲಿ ಡಿ.ಐ.ಪೂಜಾರಿ, ಜೆ.ಎಸ್.ದೊಡಮನಿ, ಭಗವಂತ ಮುಳಸಾವಳಗಿ, ಎಸ್.ಎಸ್. ಕೊಂಡಿ, ಬಿ.ಪಿ ಜೋಗಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ವರದಿ : ಯಮನಪ್ಪ ಚೌಧರಿ