ಮಿತಿ ಮೀರಿದ ಭೂ ಗಳ್ಳರ ಹಾವಳಿ: ನಕಲಿ ದಾಖಲೆ ಸೃಷ್ಟಿಸಿ ಖಾತೆಗೆ ಯತ್ನ ಕಬಳಿಕೆ | ಕಬಳಿಕೆ ಯತ್ನದ ಹಿಂದೆ ಪ್ರಭಾವಿಗಳ ಕೈವಾಡ ?
ಇಲ್ಲೊಂದಿಷ್ಟು ಮಂದಿ ಸುಮ್ಮನೆ ಕಲ್ಲು ಒಗೆಯುವ ಕೆಲಸ ನಡೆಸಿದ್ದಾರೆ ! ಅಕಸ್ಮಾತ್ ಇವರು ಅಂದುಕೊಂಡಂತೆ ನಡೆದರೆ ಜಾಕ್ಪಾಟ್ ಹೊಡೆದಂತೆ !!
ಗುರಿ ಸರಿಯಾಗಿದ್ದರೆ ‘ಹಣ್ಣು’ ದೊರೆಯುತ್ತದೆ, ಇಲ್ಲದಿದ್ದರೆ ಕಲ್ಲು ದೊರೆಯುತ್ತದೆ ಎನ್ನುವುದು ಇವರ ಅಭಿಮತ. ಆದರೆ ಈ ಕೆಲಸಕ್ಕೆ ಯಾರಾದರೂ ‘ಕಲ್ಲು ಹಾಕುತ್ತಾರೋ ‘ಎನ್ನುವ ಆತಂಕವೂ ಅವರನ್ನು ಕಾಡುತ್ತಿದೆ.
ವಿಷಯ ಇಷ್ಟೆ. ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಚಿಕ್ಕನೆಕ್ಕುಂದಿ ಗ್ರಾಮದ ಸರ್ವೆ ನಂ. 55/2 ರಲ್ಲಿ ಒಟ್ಟು ವಿಸ್ತೀರ್ಣ 3-33.00 ಗುಂಟೆ ಇದ್ದು ಆ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ಕೆಲವರು ಹೊಂಚು ಹಾಕಿದ್ದಾರೆ.
ಪ್ರಭಾವಿಗಳ ಕೈವಾಡ ?:
ಸದರಿ ಜಮೀನು ಮೂಲತಃ ನಂಜುಂಡಪ್ಪ ಬಿನ್ ನಡುಪಣ್ಣ ರವರದಾಗಿದ್ದು, ಪಹಣಿಗಳಲ್ಲಿ 1960 ರಿಂದ 1989 ರವರೆಗೂ ನಂಜುಂಡಪ್ಪ ಎಂದು ನಮೂದಾಗಿದ್ದು 1990 ರಿಂದ 2000 ರ ಪಹಣಿಗಳಲ್ಲಿ ಕಂದಾಯ ಅಧಿಕಾರಿಗಳ ಕೈತಪ್ಪಿನಿಂದ ಕೈ ಬರಹ ಪಹಣಿಗಳಲ್ಲಿ ನಂಜುಂಡಪ್ಪ ಎಂಬುದರ ಬದಲಾಗಿ ನಂಜುಂಡರೆಡ್ಡಿ ಬಿನ್ ನಡುಪರೆಡ್ಡಿ ಎಂದು ತಪ್ಪಾಗಿ ನಮೂದಾಗಿರುತ್ತದೆ. ತದನಂತರ ಗಣಕೀಕೃತ ಪಹಣಿಗಳಲ್ಲಿಯೂ ಸಹ ನಂಜುಂಡರೆಡ್ಡಿ ಬಿನ್ ನಡಪರೆಡ್ಡಿ ಎಂದು ನಮೂದಾಗಿ ಬಂದಿರುತ್ತದೆ. ಈಗ ಆ ಹೆಸರು ಬದಲಾವಣೆ ಆದ್ದರಿಂದ ಅದನ್ನೇ ಮುಂದಿಟ್ಟುಕೊಂಡು ಭೂಮಿ ಕಬಳಿಸಲು ಖಾಸಗಿ ವ್ಯಕ್ತಿಗಳು ಮುಂದಾಗಿರುವುದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆ ಜಮೀನಿನ ವಾರಸ್ದಾರ ದೂರುತ್ತಿದ್ದಾರೆ.
ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒಂದು ವರ್ಷದ ಹಿಂದೆಯೇ ಗ್ರಾಮದ ಹಿರಿಯರು ಜೊತೆ ಆ ಜಮೀನಿನ ಹಕ್ಕುದಾರರು ತಹಸೀಲ್ದಾರರನ್ನು ಭೇಟಿ ಮಾಡಿ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಅಧಿಕಾರಿಗಳ ಕೈತಪ್ಪಿನಿಂದ ಕೈ ಬರಹ ಪಹಣಿಗಳಲ್ಲಿ ಸರಿಯಾಗಿ ಪಹಣಿಯಲ್ಲಿ ನಮೂದಿಸದ ಕಾರಣ ಇಂದು ಭೂ ಮಾಲೀಕನಿಗೆ ಅಧಿಕಾರಿಗಳಿಂದ ವಂಚನೆ
ಈ ಬಗ್ಗೆ ಈಗ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಸಿಬ್ಬಂದಿ ಜಾಗದ ಫೋಟೊ ವರದಿಯನ್ನು ವಿಶೇಷ ತಹಸೀಲ್ದಾರರಿಗೆ ಸಲ್ಲಿಸಿದ್ದಾರೆ.
ವರದಿ :- ನಾಗರಾಜ್ ಪದ್ಮಶಾಲಿ