ಕುಮಟಾ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ ಕಡಮೆಯಲ್ಲಿ ಸಡಗರ ಸಂಭ್ರಮದಿಂದ ಕನಕದಾಸ ಜಯಂತಿ ಆಚರಣೆ ನಡೆಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕನಕದಾಸ ಜಯಂತಿಗೆ ಚಾಲನೆ ನೀಡಿದರು.
ಶಿಕ್ಷಕ ಆನಂದ ನಾಯ್ಕ ಮಾತನಾಡಿ “ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ತತ್ವಜ್ಞಾನಿ ಕನಕದಾಸರು, ನಾವೆಲ್ಲಾ ದೇವರ ಮಕ್ಕಳು. ಜಾತಿ,ಮತ,ಪಂಥ ಎಂಬ ಭೇದ ಭಾವ ಮರೆತು ನಾವೆಲ್ಲರೂ ಮನುಷ್ಯರು ಎಂಬ ಸಂದೇಶ ನೀಡಿದ್ದು ಇದಕ್ಕೆ ಕನಕನ ಕಿಂಡಿಯೇ ಜೀವಂತ ಸಾಕ್ಷಿ.. ಎಂದರು.
ಮುಖ್ಯಾಧ್ಯಾಪಕರಾದ ಉಮಾ ಜಿ ನಾಯ್ಕ ಮಾತನಾಡಿ “ಕನಕದಾಸರ ತತ್ವಗಳನ್ನು ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಅಳವಡಿಸಿಕೊಂಡು ನಿಮ್ಮ ಕೈಲಾದಷ್ಟು ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಿ” ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಲತಾ ಗೌಡ, ರಾಜೀವ ಗಾಂವಕರ, ದೇವಯಾನಿ ನಾಯಕ, ನಯನಾ ಜಿ.ಪಿ, ವೈಶಾಲಿ ನಾಯಕ, ನಾಗರತ್ನ ಗೌಡ, ಸವಿತಾ ಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಭಾಷಣ, ಗಾಯನ, ವಾಚಕ ವಾಚನ, ನಡೆಯಿತು. ಪಲ್ಲವಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿನಿ ದೀಕ್ಷಾ ರಮೇಶ ಗೌಡ ಸರ್ವರನ್ನು ಸ್ವಾಗತಿಸಿದಳು. ವಿದ್ಯಾರ್ಥಿನಿ ಲಕ್ಷ್ಮೀ ಗೌಡ ಕಾರ್ಯಕ್ರಮ ನಿರೂಪಿಸಿದಳು. ವಿದ್ಯಾರ್ಥಿನಿ ಖುಷಿ ಗೌಡ ವಂದಿಸಿದಳು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
