ಜೇವರ್ಗಿ ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಯ ರೈತರ ಪಹಣಿಯಲ್ಲಿ ಕಾಲಂ ನಂಬರ್ ೧೧ರಲ್ಲಿ ವಕ್ಪ ಎಂದು ಬಂದಿರುವ ಕಾರಣ ತಾಲೂಕಿನ ರೈತರು ಆತಂಕ ಪಡುವಂತಾಗಿದೆ ಇದನ್ನು ಕೂಡಲೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರು ಸರಕಾರದ ಅವಜ್ಞಾನಿಕ ನೀತಿಯಿಂದ ರಾಜ್ಯದ ರೈತರು ಸಂಕಷ್ಟ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ನೂರಾರು ರೈತ ಪರ ಹೋರಾಟಗಾರರೊಂದಿಗೆ ಜೇವರ್ಗಿ ತಾಲೂಕಿನ ರಾಜ್ಯ ರಸ್ತೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು ಹಾಗು ಈ ಸಂದರ್ಭದಲ್ಲಿ ಜೆವರ್ಗಿ ತಾಲೂಕಿನ ಮಾಜಿ ಶಾಸಕರಾದ ದೊಡ್ಡಪ ಗೌಡ ಎಸ್ ಪಾಟೀಲ್ ನರಬೋಳ್ ಅವರು ರೈತಪರ ಹೋರಾಟಕ್ಕೆ ಬೆಂಬಲ ನೀಡಿ ಸರ್ಕಾರದ ವಿರುದ್ಧ ಕಿಡಿಕಾರಿದರು.ವಕ್ಪ ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ಇ ಸರ್ಕಾರ ನಡೆಸಿದೆ ಅದೇ ರೀತಿಯಾಗಿ ಈಗಾಗಲೇ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಹೊಡೆತದಿಂದ ರೈತರು ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂಕಷ್ಟದ ಸಮಯದಲ್ಲಿ ರೈತರ ಜೀವದ ಜೊತೆ ತುಘುಲಕ್ ಸರಕಾರ ವಕ್ಪ ಹೆಸರಿನಲ್ಲಿ ರಾಜ್ಯದ ರೈತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಮುಂದೆ ಬರುವಂತ ದಿನಗಳಲ್ಲಿ ರೈತರು ಈ ಸರ್ಕಾರಕ್ಕೆ ಬುದ್ಧಿ ಕಲಿಸಲಿದ್ದಾರೆ ಎಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು ಅದೇ ರೀತಿಯಾಗಿ ಜೆವರ್ಗಿ ತಾಲೂಕಿನ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ನಿಂಗಣ್ಣ ರದ್ದೇವಾಡಗಿ ಅವರು ಭಾಗವಹಿಸಿ ರೈತ ಪರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು ಸರಕಾರದ ಅವಜ್ಞಾನಿಕ ನೀತಿಯಿಂದ ರೈತರ ಪಹಣಿಯಲ್ಲಿ ವಕ್ಪ ಎಂದು ಬಂದಿರುವುದರಿಂದ ಸಹಕಾರಿ ಬ್ಯಾಂಕುಗಳಲ್ಲಿ ಹಾಗೂ ಸರ್ಕಾರಿ ಬ್ಯಾಂಕುಗಳಲ್ಲಿ ರೈತರಿಗೆ ಸಾಲ ಸೌಲಭ್ಯ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಎಡವಟ್ಟಿನಿಂದ ಆದ ವಕ್ಪ ಎನ್ನುವ ಹೆಸರನ್ನು ಕೂಡಲೇ ತೆಗೆದು ಹಾಕಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು ಅದೇ ರೀತಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರ ಸಮ್ಮುಖದಲ್ಲಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು
