ಯಡ್ರಾಮಿ ಪಟ್ಟಣದಲ್ಲಿ ದಿನಾಂಕ 18 11 2024 ರಂದು ಸೋಮವಾರ ಭಕ್ತ ಕನಕದಾಸರ ಜಯಂತಿಯ ನಿಮಿತ್ಯ ಕನಕದಾಸರ ಭಾವಚಿತ್ರದೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಗೊಳ್ಳಿ ರಾಯಣ್ಣನ ಸರ್ಕಲ್ ದಿಂದ ತಹಶೀಲ್ ಕಾರ್ಯಾಲಯದವರಿಗೆ ಅದ್ದೂರಿಯಾಗಿ ಮೆರವಣಿಗೆ ಸಾಗಿತು. ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ವತಿಯಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆಯನ್ನು ಮಾನ್ಯ ತಹಶೀಲ್ದಾರರು ಶಶಿಕಲಾ ಪಾದಗಟ್ಟಿ ಅವರ ವಹಿಸಿಕೊಂಡಿದ್ದರು. ಮತ್ತು ಮುಖ್ಯ ಅತಿಥಿ ಸ್ಥಾನವನ್ನು ಕರ್ನಾಟಕ ಪ್ರದೇಶ ಕುರುಬ ಸಂಘ ತಾಲೂಕು ಅಧ್ಯಕ್ಷರು ಮಲ್ಲ ಕುಳಗೆರಾ ವೇದಿಕೆ ಮೇಲೆ ಉಪನ್ಯಾಸಕರಾಗಿ ಎಸ್ ಎಸ್ ಮಾಲಿ ಬಿರಾದರ್ ಅವರು ಕನಕದಾಸರ ಜೀವನ ಚರಿತ್ರೆಯ ಬಗ್ಗೆ ಸಹ ವಿಸ್ತಾರವಾಗಿ ಹಂಚಿಕೊಂಡರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಯಡ್ರಾಮಿ ತಾಲೂಕಿನ ನೌಕರ ಸಂಘದ ಅಧ್ಯಕ್ಷ ಶಿವು ಡಂಬಳ ಇನ್ನು ಹಲವಾರು ಗಣ್ಯ ಮಾನ್ಯರು ಉಪಸ್ಥಿತರಿದ್ದರು ನಿಂಗಣ್ಣ ಸರ್ ನಿರೂಪಿಸಿ ವಿಶ್ವನಾಥ್ ಎನ್ ಪೂಜಾರಿ ಸ್ವಾಗತಿಸಿ ದೋಣಿ ಸರ್ ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ವರದಿ.. ವಿಶ್ವನಾಥ್ ಎನ್ ಪೂಜಾರ