ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ವಿಜಯದಶಮಿ ನಿಮಿತ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೆಟಗುಡ್ಡ ಹೊಬಳಿ ಇವರು ಪಥಸಂಚಲನ ಆಯೋಜಿಸಿದ್ದರು. ಪಥಸಂಚಲನದಲ್ಲಿ ಯಾದವಾಡ ಗ್ರಾಮದ ಸುಮಾರು 160 ರಾಷ್ಟ್ರೀಯ ಸ್ವಯಂ ಸೇವಕರು ಘನವೇಷಗಳನ್ನು ತೊಟ್ಟು ಭಾಗವಹಿಸಿದ್ದರು . ಪಥಸಂಚಲನವು ಯಾದವಾಡ ಗ್ರಾಮದ ಘಟ್ಟಗಿಬಸವೇಶ್ವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಗೌರಿಕಟ್ಟಿ, ಮಾಚಕಟ್ಟಿ ಓಣಿ, ಶ್ರೀ ರಾಘವೇಂದ್ರ ಸ್ವಾಮಿಮಠ, ಪೇಠೆಯ ಹನುಮಾನ ಮಂದಿರ ಬಸವೇಶ್ವರ ಸರ್ಕಲ ಮಾರ್ಗವಾಗಿ ಜಿ.ಎನ್.ಎಸ್. ಹೈಸ್ಕೂಲಿನ ಮೈದಾನದಲ್ಲಿ ಬಂದು ಸೇರಿದರು. ಪಥಸಂಚಲನದ ದಾರಿಯುದ್ದಕ್ಕೂ ಗ್ರಾಮಸ್ಥರು ರಂಗೋಲಿ ಹಾಕಿ ಗ್ರಾಮವನ್ನು ಸಿಂಗರಿಸಿದ್ದರು ಪಥಸಂಚಲನದ ಮಾರ್ಗದುದ್ದಕ್ಕೂ ಗ್ರಾಮಸ್ಥರು ಪುಷ್ಪಗಳನ್ನು ಎಸೆದು ಸ್ವಯಂ ಸೇವಕರಿಗೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಮೊದಲಿಗೆ ಹಿಂದೂ ದ್ವಜಾರೋಹನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಮೂಖ್ಯ ಅತಿಥಿಗಳಾಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಯಾದವಾಡ ಉಪಸ್ಥಿತರಿದ್ದರು .ಮತ್ತೋರ್ವ ಅತಿಥಿಗಳಾಗಿ ಶ್ರೀ ಸುರೇಶ ನಿಂಗಪ್ಪನವರ ಪರಿಸರ ಸಂರಕ್ಷಣಾ ಗತಿವಿಧಿಯ ಪ್ರಾಂತ ಸಂಯೋಜಕರು ಉಪಸ್ಥಿತರಿದ್ದರು. ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಆಶಿರ್ವಚನ ಮಾಡಿದರು ಅದೇ ರೀತಿ ಶ್ರೀ ಸುರೇಶ ನಿಂಗಪ್ಪನವರ ಮಾತನಾಡಿ ಸಂಘಟನೆ ಮತ್ತು ಶಾಖೆಯನ್ನು ಯಾಕೆ ಮಾಡಬೇಕು ಎಂದು ವಿವರವಾಗಿ ಹೇಳಿದರು. ಪರಮಪೂಜ್ಯ ಮೊಹನಜಿ ಭಾಗವತ ರವರ 5 ಸುತ್ರಗಳನ್ನು ಪಾಲಿಸಲು ಹೇಳಿದರು. 1) ಸಾಮರಸ್ಯ , ಪರಸ್ಪರ ಸಾಮರಸ್ಯದಿಂದ ಬದುಕುವುದು. ಸಾಮರಸ್ಯ ವೇದಿಕೆಗಳನ್ನು ರಚನೆ ಮಾಡಿಕೊಳ್ಳುವುದು. 2) ಕುಟುಂಬ ವ್ಯವಸ್ಥೆ ಕುಟುಂಬ ಸಂರಕ್ಷಣೆ ಮಾಡಿಕೊಳ್ಳುವುದು ಒಕ್ಕಾಟ್ಟಾಗಿ ಬದುಕುವುದು. 3) ಸ್ವದೇಶಿ ಜೀವನ ಶೈಲಿ ಅಳವಡಿಸಿಕೊಳ್ಳುವುದು. ನಮ್ಮ ಪಾರಂಪರಿಕ ಉಡುಗೆ ತೊಡುಗೆಗಳನ್ನು ದರಿಸುವುದು ಮಕ್ಕಳಿಗೂ ಅವುಗಳನ್ನೆ ರೂಡಿಮಾಡುವುದು 4) ಸ್ವದೇಶಿ ವಸ್ತುಗಳ ಉಪಯೋಗ. ಇದರಿಂದ ನಮ್ಮ ರಾಷ್ಟ್ರ ಆರ್ಥಿಕವಾಗಿ ಸದೃಡವಾಗುತ್ತದೆ 5) ಪರಿಸರ ಸಂರಕ್ಷಣೆ 3 ಪಿ ಗಳನ್ನು ಪಾಲಿಸುವುದು. ಅ) ಪೆಡ ಲಗಾವೋ ಗಿಡಗಳನ್ನು ಹಚ್ಚುವುದು ಬ) ಪಾನಿ ಬಚಾವೋ ನೀರನ್ನು ಸಂರಕ್ಷಿಸುವುದು. ಕ) ಪಾಲಿಥಿನ ಹಟಾವು ಪ್ಲಾಸ್ಟಿಕ ಮುಕ್ತ ನಗರ ನಿರ್ಮಾಣ ಮಾಡುವುದು ಈ ನಿಯಮಗಳನ್ನು ಪಾಲಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು .
ಸ್ವಾಗತ ಬಾಷಣ ಮತ್ತು ಅತಿಥಿಗಳ ಪರಿಚಯವನ್ನು ಪವಣ ಕಲ್ಯಾಣಿ , ವಂದನಾರ್ಫನೆಯನ್ನು ದಯಾನಂದ ಮಂಟೂರ ನೇರವೇರಿಸಿದರು . ಸಂಘದ ಪ್ರಮುಖರು ಪ್ರಭು ಪಾಟೀಲ , ಪ್ರಕಾಶ ಮೇಲ್ಮನಿ , ಸತೀಷ ಪಾಟೀಲ ಅಶೋಕ ನಾಯಕ ಶಂಕರ ಹಳಂಗಳಿ ಡಾ: ವಿಶ್ವನಾಥ ತಂವಶಿ ಗ್ರಾಮಪಂಚಾಯತಿಯ ಉಪಾಧ್ಯಕ್ಷರಾದ ಕಲ್ಮೇಶ ಗಾಣಗಿ , ಬಸಲಿಂಗಪ್ಪ ಢವಳೇಶ್ವರ, ರಾಜು ಕಲ್ಯಾಣಿ, ಸುರೇಶ ವನಕಿ, ಗುರು ಬಳಗಾರ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
