ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ 29-11-2024 ರಂದು ಕನ್ನಡ ರಾಜ್ಯೋತ್ಸವದ ಸಾಂಸ್ಕ್ರತಿಕ ಹಬ್ಬ
ಮೂಡಲಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಕಲ್ಮೇಶ ಗಾಣಗಿ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಯಾದವಾಡ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮೂಹ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಬಾರಿಯ ಕಾರ್ಯಕ್ರಮಗಳು ಅತ್ಯಂತ ವಿಷೇಷವಾಗಿದ್ದು ಇದೇ ಮೊದಲ ಬಾರಿಗೆ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಆಗಮಿಸುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿಮಾಡಿದರು.
ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮೇಡಮ್ ಉದ್ಘಾಟನೆ ಮಾಡುತ್ತಿದ್ದು , ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ತಂಡಗಳು ಬೇರೆ ಬೇರೆ ಉರುಗಳಿಂದ ಆಗಮಿಸುತ್ತಿದ್ದು ಉತ್ತಮ ಅನುಭವಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಮತ್ತು ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದರು , ಸಂಜೆ 6.00 ಘಂಟೆಗೆ ಸಮೂಹ ನೃತ್ಯ ಸ್ಪರ್ದೆ ಆರಂಭವಾಗಲಿದ್ದು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 35 ಸಾವಿರ, ದ್ವೀತಿಯ ಸ್ಥಾನ ಪಡೆದವರಿಗೆ 30 ಸಾವಿರ , ತೃತೀಯ ಸ್ಥಾನ ಪಡೆದವರಿಗೆ 25 ಸಾವಿರ , ಚತುರ್ಥ 20 ಸಾವಿರ , ಐದನೇ 15 ಸಾವಿರ , ಆರನೇ 10 ಸಾವಿರ , ಏಳನೇ 7 ಸಾವಿರ , ಎಂಟನೇ ಬಹುಮಾನವಾಗಿ 5 ಸಾವಿರ ರೂ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು . ಹೆಚ್ಚಿನ ಮಾಹಿತಿಗಾಗಿ ಮೊ. 9538573484 , 9739483248, 9901774988 , 9008316143 ಸಂಪರ್ಕಿಸಬೇಕೆಂದು ಎಂದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯ ಸಂಸ್ಥಾಪಕರಾದ ಕಲ್ಮೇಶ ಗಾಣಗಿ , ಸಂಘಟನಾ ಪ್ರಮುಖರಾದ ವೆಂಕಟೇಶ ಇಟ್ಟನ್ನವರ ಮತ್ತು ವೇಂಕಟೇಶ ದಾಸರ ಉಪಸ್ಥಿತರಿದ್ದರು.
