ಆಲಮೇಲ್ ಸಮೀಪದ ಕಡಣಿ ಶ್ರವಣೀ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆ ದೇಶದ ನಿಜವಾದ ಸಂಪತ್ತು ಮಕ್ಕಳು ಎಂದು ಶಾಲೆಯ ಮುಖ್ಯೋಪಾಧ್ಯವರಾದ ಶರಣಯ್ಯ ಹಿರೇಮಠ ಹೇಳಿದರು. ಮಕ್ಕಳು ಸಂಸ್ಕಾರಯುತ ಬೆಳವಾಣಿಗೆಯಲ್ಲಿ ಪಾಲಕರ ಪಾತ್ರ ಹಿರಿದು ಪಾಲಕರು ಮಕ್ಕಳ ಬೆಳವಣಿಗೆಯ ಕಡೆಗೆ ವಿಶೇಷ ಕಾಳಜಿ ವಹಿಸಬೇಕು ಸಮಾಜ ಮಕ್ಕಳ ಭಾವನೆ.ಹಕ್ಕುಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಮಕ್ಕಳ ಈ ದೇಶದ ಭವಿಷ್ಯ ಮತ್ತು ಆಸ್ತಿ ಎಂದು ಮಾಜಿ ಪ್ರಧಾನಿ ಜವಹಾರಲಾಲ್ ನೆಹರು ಹೇಳುತ್ತಿದ್ದರು ಹೀಗಾಗಿ ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಅವರನ್ನೇ ರಾಷ್ಟ್ರದ ಆಸ್ತಿಯನ್ನಾಗಿ ರೂಪಿಸಬೇಕು. ಮಕ್ಕಳು ದೇಶದ ಬೆನ್ನೆಲುಬು ಅವರನ್ನು ಆದರ್ಶಪ್ರಾಯಾನ್ನಾಗಿಸುವುದು ಪಾಲಕರ ಹಾಗೂ ಶಿಕ್ಷಕರ ಮಹತ್ವದ ಜವಾಬ್ದರವಾಗಿದೆ. ವಿದ್ಯಾರ್ಥಿಗಳಾದ ದ್ರುವ ಕಟಬರ. ರಾಣಿ ಹಿಟ್ನಳ್ಳಿ. ಸುಪ್ರೀತಾ ಕ್ಷತ್ರಿ. ಐಶು ಕ್ಷತ್ರಿ. ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರ ಸಿಬ್ಬಂದಿ ಕೂಡ ಹಾಜರಿದ್ದರು
ವರದಿ. ಉಮೇಶ್ ಕಟಬರ