ಜಂತು ಹುಳು ಮುಕ್ತ ಮಕ್ಕಳು ಆರೋಗ್ಯವಂತ ಮಕ್ಕಳು,
ದೇಶದಾದ್ಯಂತ ದಿನಾಂಕ 9.12.2024 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ನಡೆಸಲಾಗುವುದು,
ಇಂದು ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು, ಗೋಣಿಕೊಪ್ಪಲ್ಲಿನ ಹರಿಶ್ಚಂದ್ರ ಪುರ ಅಂಗನವಾಡಿ ಕೇಂದ್ರದಲ್ಲಿ ಜಂತುಹುಳು ನಿವಾರಣ ಮಾತ್ರೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು
ಈ ಕಾರ್ಯಕ್ರಮವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮಾನ್ ಕುಲ್ಲಚಂಡ ಪ್ರಮೋದ್ ಗಣಪತಿ ರವರು ಮಕ್ಕಳ ಬಾಯಿಗೆ ಮಾತ್ರೆಯನ್ನು ನೀಡುವುದರ ಮೂಲಕ ಇಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ತಾಲೂಕು ವೈದ್ಯಾಧಿಕಾರಿಯಾದ ಶ್ರೀಮಾನ್ ಡಾಕ್ಟರ್ ಯತಿರಾಜ್ ರವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಾದ ಶ್ರೀಮಾನ್ ಪೂಣಚ್ಚ ಅವರು ಎಸಿಡಿಪಿಯೋ ರವರಾದ ಶ್ರೀಮತಿ ರೀತಾರವರು, ಆರೋಗ್ಯ ಅಧಿಕಾರಿಯವರಾದ ಶ್ರೀಮಾನ್ ಶಿವಯ್ಯ, ಶ್ರೀಮಾನ್ ಶಶಿಕಾಂತ್, ಶ್ರೀಮತಿ ಸಂಗೀತ, ತಾಲೂಕು ಎಲ್ ಹೆಚ್ ವಿ ಶ್ರೀಮತಿ ಕಾವೇರಮ್ಮ ರವರು ಸಂಜೀವಿನಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವರಲಕ್ಷ್ಮಿ ರವರು ಸಿಎಚ್ಒ ಪೃಥ್ವಿ ರವರು ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಶಿವಮ್ಮ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ಸಹಾಯಕಿ ಶ್ರೀಮತಿ ಯಮುನಾ ಬಿ ಎಸ್ ಆಶಾ ಕಾರ್ಯಕರ್ತೆಯರಾದ ಚಿತ್ರ, ದಮಯಂತಿ ಪುಟಾಣಿ ಮಕ್ಕಳು ಹಾಗೂ ಪೋಷಕವೃಂದದವರು ಹಾಜರಿದ್ದರು, ಇಂದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರಾರಂಭಿಸಿ ಮಕ್ಕಳಿಗೆ ಮಾತ್ರೆಗಳನ್ನು ನೀಡಿ ಎಲ್ಲರಿಗೂ ಆರೋಗ್ಯ ಶಿಕ್ಷಣಾ ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
