ಚಳಿಗಾಲದ ಅಧಿವೇಶನದಲ್ಲಿ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ವಿವಿಧ ಬೇಡಿಕೆಯನ್ನು ಪೂರೈಸಿ ಮತ್ತು ಈ ಸಮಾಜದ ಪರವಾಗಿ ಅಧಿವೇಶನದಲ್ಲಿ ಧ್ವನಿಯಾಗಿ ಮಾತನಾಡಿ ಎಂದು ಡಾ.ಎಮ್.ಬಿ ಹಡಪದ ಸುಗೂರ ಎನ್ ಒತ್ತಾಯ. ಹಡಪದ ಅಪ್ಪಣ್ಣ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಗೆ ಒತ್ತಾಯ
ಕಲಬುರಗಿ:-ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಬೇಕು ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸಂಘ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ರಾಜ್ಯದಲ್ಲಿ 15 ರಿಂದ 16 ಲಕ್ಷ ಹಡಪದ ಅಪ್ಪಣ್ಣ ಸಮುದಾಯದ ಜನಸಂಖ್ಯೆಯಲ್ಲಿ ಈ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಔದ್ಯೋಗಿಕ, ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿದೆ.
ಬಡತನದಲ್ಲಿ ಕಷ್ಟಕರ ಜೀವನ ಸಾಗಿಸುತ್ತಿರುವ ಶೋಷಿತ ಸಮಾಜವಾಗಿದೆ. ಕಳೆದ ಹಲವಾರು ವರ್ಷಗಳಿಂದ ಹಡಪದ ಅಪ್ಪಣ್ಣ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಹೋರಾಟ ನಡೆಸಲಾಗುತ್ತಿದೆ.
ಹಿಂದಿನ ಬಿಜೆಪಿ ಸರ್ಕಾರ ಹಡಪದ ಅಪ್ಪಣ್ಣ ಸಮಾಜ ನಿಗಮ ಮಂಡಳಿ ಸೇರಿದಂತೆ ಒಟ್ಟು ೧೩ ಜಾತಿಗಳನ್ನೊಳಗೊಂಡ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಇದುವರೆಗೂ ಯಾವುದೇ ನಿಗಮ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರದೇ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸಮುದಾಯವನ್ನು ಮತ ಬ್ಯಾಂಕ್ಗಳಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಗಳೂ ಸಹ ಸಮುದಾಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ.ಈ ಹಿನ್ನೆಲೆಯಲ್ಲಿ ಹಡಪದ ಅಪ್ಪಣ್ಣ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಬೇಕೆಂದು ಮತ್ತು ನಿಗಮಕ್ಕೆ 50 ಕೋಟಿ ರೂ.ಮೀಸಲಿಡುವಂತೆ .ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಬಸವಣ್ಣನವರ ಅರಿವಿನ ಮನೆ(ಗವಿಯ) ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ(ಗವಿಯ) ಭೋಡ್೯ ಈಗಾಗಲೇ ಕಿತ್ತುಹಾಕಿದ್ದು. ಅಕ್ಷಮ್ಯ ಅಪರಾಧ. ಈ ವಿಷಯದ ಕುರಿತು ಸಹ ಚರ್ಚೆ ನಡೆಯಲಿ. ೧೨ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ನಿಜಸುಖಿ ಹಡಪದ ನವರ ಗವಿಯನ್ನು ಅಭಿವೃದ್ಧಿ ಪಡಿಸದೇ ಇರುವುದು ನೋವಿನ ಸಂಗತಿ ಯಾಗಿದ್ದು ಇದನ್ನು ಬಿಕೆಡಿಬಿ ಗೆ ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸುವ ಕೆಲಸ ಆಗಲಿ.? ಮತ್ತು ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯ ದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ ಪ್ರತ್ಯೇಕ ಕಟ್ಟಡಕ್ಕೆ 2 ಕೋಟಿ ರೂ ಮೀಸಲಿಡಬೇಕು. ಹಾಗೆ ಹಡಪದ ಅಪ್ಪಣ್ಣ ಸಮಾಜವನ್ನು ಪ್ರವರ್ಗ -೧ ಕ್ಕೆ ಅಥವಾ ಎಸ್ಟಿಗೇ ಇಲ್ಲವಾದರೆ ಎಸ್ಸಿಗೇ ಸೇರಿಸುವುದರ ಮೂಲಕ ಒಳ ಮೀಸಲಾತಿ ನೀಡುವ ಮೂಲಕ ಈ ಸಣ್ಣ ಸಣ್ಣ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ಮನವಿ. ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ. ಹಾಗೂ ತಾಯಿ ಹಡಪದ ಲಿಂಗಮ್ಮ ನವರ ಜನ್ಮಸ್ಥಳ ದೇಗಿನಹಾಳ ವನ್ನು ಕೂಡಲಸಂಗಮ ಅಭಿವೃದ್ಧಿಯ ಪ್ರಾಧಿಕಾರ ಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಲು ಒತ್ತಾಯಿಸಿದ್ದಾರೆ. ಇದೇ ಡಿ. 9 ರಂದು ಶುರುವಾಗುವ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಬಗ್ಗೆ ಧ್ವನಿಯಾಗಿ ಮತ್ತು ಈ ಸಮಾಜಕ್ಕೆ ಅನೇಕ ಮೀಸಲಾತಿ ನೀಡುವಂತೆ ಸುವರ್ಣ ಸೌಧದ ಒಳಗೆ ಸಿ.ಎಮ್ ಸಿದ್ರಾಮಯ್ಯನವರು ಮತ್ತು ಡಿ.ಸಿ ಎಮ್ ಡಿ.ಕೆ ಶಿವಕುಮಾರ. ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ. ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ. ಹಾಗೂ ಅನೇಕ ಸಚಿವರು. ಶಾಸಕರು. ಮತ್ತು ವಿಧಾನ ಪರಿಷತ್ ಸದಸ್ಯರು. ಸೇರಿದಂತೆ ವಿರೋಧ ಪಕ್ಷದ ನಾಯಕರು ಸಹ ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮುದಾಯದ ಅಭಿವೃದ್ಧಿಯ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ಕಲೆಹಾಕಿ. ಈ ಸಮಾಜವನ್ನು ಕುಲ ಶಾಸ್ತ್ರ ಅಧ್ಯಯನ ಮಾಡಿ. ಜಾತಿ ಗಣತಿಯ ಪ್ರಕಾರ ಮೀಸಲಾತಿ ನೀಡಿ. ಮತ್ತು ಈ ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಆರೋಗ್ಯ ದ ಹಿತದೃಷ್ಟಿಯಿಂದ ಈ ಕ್ಷೌರಿಕ ಕುಟುಂಬಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ದಿನೇಶ್ ಗುಂಡೂರಾವ್ ಅವರು ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಮೆಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಖಾಸಗಿ) ಆಸ್ಪತ್ರೆ ಯಲ್ಲಿ ಅವರಿಗೆ ಆರೋಗ್ಯ ಹೆಲ್ತ್ ಕಾಡ್೯ ಗಳನ್ನು ಈ ಕ್ಷೌರಿಕ ಕುಟುಂಬಕ್ಕೆ ನೀಡಲು ಮನವಿ ಮಾಡಲಾಗುವ.,
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ, ಮತ್ತು ಕಲಬುರಗಿ ಜಿಲ್ಲೆಯ ಅಧ್ಯಕ್ಷರಾದ ಈರಣ್ಣ ಸಿ ಹಡಪದ ಸಣ್ಣೂರ, ಮತ್ತು ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಹಾಗೂ ಜಿಲ್ಲಾ ಕಾರ್ಯಧ್ಯಕ್ಷರು ಭಗವಂತ ಶಿಕ್ಷಕರು ಕಿರಣಗಿ, ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ್ ನೀಲೂರ, ಹಾಗೂ ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ. ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮತ್ತು ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ. ಹಾಗೂ ಕಲಬುರಗಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ತೋನಸನಹಳ್ಳಿ , ಮತ್ತು ಪ್ರ ಕಾರ್ಯದರ್ಶಿ ವಿನೋದ ಅಂಬಲಗಾ ಸೇರಿದಂತೆ ಪದಾಧಿಕಾರಿಗಳಾದ ಶಂಕರ ಹರವಾಳ, ಮಲ್ಲಿಕಾರ್ಜುನ ಬೆಳಲಗುಪ್ಪಿ, ನಿಂಗಣ್ಣ ಯಾತನೂರ , ಇತರರು ಇದ್ದರು.ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮತ್ತು ಸಮಾಜದ ಕಾಯಕ ಬಂಧು ಗಳಿಗೆ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಕಾನೂನು ಪ್ರಕಾರ “ಅಟ್ರಾಸಿಟಿ’ ಜಾರಿಗೆ ತರಲೇಬೇಕು ಎಂದು ಸರ್ಕಾರಕ್ಕೆ ಒತ್ತಾಯ ಹಾಕಿದರು,