ಕುಮಟಾ :-ಪಟ್ಟಣದ ಕೊಪ್ಪಳಕರವಾಡಿಯಲ್ಲಿರುವ ಶಾಸಕ ದಿನಕರ್ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ಕಳುವಾಗಿದೆ. ಶಾಸಕರ ಮನೆಯ ಬಳಿ ಸಹಾಯ ಕೇಳಿಕೊಂಡ ಬಂದ ಹೊನ್ನಾವರ ಮೂಲದ ಮಹಿಳೆಯು ಮನೆಯೊಳಗಿನ ಕಬೋಡನಲ್ಲಿದ್ದ 80 ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದಾಳೆ. ಶಾಸಕರ ಮನೆಯಲ್ಲಿ ಪದೇ ಪದೇ ಸಹಾಯ ಕೇಳಿಕೊಂಡು ಬರುತ್ತಿದ್ದ ಮಹಿಳೆ ಶಾಸಕರ ಮನೆಯಲ್ಲಿ ಹಣ ಎಲ್ಲಿ ಇರುತ್ತೆ ಎಂಬುದು ತಿಳಿದುಕೊಂಡು ಸಹಾಯ ಕೇಳುವ ನೆಪದಲ್ಲಿ ಶಾಸಕರ ಮನೆಗೆ ಬಂದು 80000 ಸಾವಿರ ನಗದು ಹಣ ಕಬೋಡದಿಂದ ಕಳವು ಮಾಡಿ ಪರಾರಿಯಾದ್ದಾಳೆ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
