ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತ.ಬೆಂಗಳೂರು ಶಾಂತಿಗ್ರಾಮ ರಸ್ತೆಯ ಮೂಲಕ ಹಾಸನಕ್ಕೆ ಆಗಮಿಸುತ್ತಿದ್ದ ವೇಳೆ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಎನ್ನಲಾಗಿದೆಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಪೊಲೀಸರು ತಕ್ಷಣವೇ ಎಚ್ಚೆತ್ತು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಚಿವರನ್ನು ಬದಲಿ ವಾಹನದಲ್ಲಿ ಸಮಾವೇಶ ಸ್ಥಳಕ್ಕೆ ಕಳಿಸಿಕೊಡಲಾಯಿತು.
ವರದಿ ಪರ್ವಿಜ್ ಅಹಮದ್ ಹಾಸನ