ಇದೆಂತಹ ಕರಾಳ ಅಮವಾಸ್ಯೆ ದಿನ , ಸಾವಿನ ಮೇಲೆ ಸಾವಿನ ಸರಣಿ ಸುದ್ದಿಗಳು ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಹಾಸನಕ್ಕೆ ಬರಬೇಕಿದ್ದ ಐಪಿಎಸ್
ಹಾಸನ: ಜೀವನ ಪರಿಯಂತ ಶ್ರಮವಹಿಸಿ ಓದಿ ಕಷ್ಟಪಟ್ಟರು ವಿಧಿಯಾಟಕ್ಕೆ ಬ ..ಲಿಯಾದ ಹೊಸ IPS ಇಂದು ಐಪಿಎಸ್ ಅಧಿಕಾರಿಯಾಗಿ ಅಧಿಕಾರ ದಂಡ ಹಿಡಿದು ಕಾರ್ಯಭಾರ ಆರಂಭಿಸಬೇಕಿದ್ದ ಯುವ ಅಧಿಕಾರಿಯೊಬ್ಬರು
- ವಿಧಿಯಾಟದ ಎದುರು ಶರಣಾಗಿ ಕರ್ತವ್ಯದ ಮೊದಲ ದಿನವೇ ಉಸಿರು ಚೆಲ್ಲಿದ್ದಾರೆ. , ಇಂದು ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಬಳಿ ಅಪಘಾ ..ತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್
- ಅಧಿಕಾರಿ ಹರ್ಷವರ್ಧನ್ ಆಸ್ಪತ್ರೆಯಲ್ಲಿ ಮೃ ..ತಪಟ್ಟರು. , ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯ ಮನೆಗೆ ಡಿಕ್ಕಿಯಾದ್ದರಿಂದ ತೀವ್ರವಾಗಿ ಪೆಟ್ಟು ಬಿದ್ದಿದ್ದ ಅವರನ್ನು ಚಿಕಿ ..ತ್ಸೆಗಾಗಿ ನಗರದ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಗೆ ,
- ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕೃತಕ ಉಸಿರಾಟದಲ್ಲಿದ್ದ ಹರ್ಷವರ್ಧನ ಮೃ ..ತಪಟ್ಟಿರುವ ವಿಷಯ ತಿಳಿಸಲಾಯಿತು.
ಹರ್ಷವರ್ಧನ್ (25) .ಮೃ ..ತ ದುರ್ದೈವಿ. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಮೈಸೂರಿನ ದಕ್ಷಿಣ ವಲಯ ಐಜಿ ಅವರ ಬಳಿ ವರದಿ ಮಾಡಿಕೊಂಡು ಹಾಸನಕ್ಕೆ ಜೀಪ್ ನಲ್ಲಿ ಬರುವಾಗ ಕಿತ್ತಾನೆ ಬಳಿ ಸಂಜೆ 4.30 ರ ವೇಳೆಗೆ ಜೀಪ್ ನ ಟೈರ್ ಸ್ಫೋಟವಾದ ಕಾರಣ ಜೀಪ್ ಮೂರು ಸುತ್ತು ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದಿತ್ತು.,
ಜೀಪ್ ಚಾಲಕ ಮಂಜೇಗೌಡರಿಗೂ ಗಾಯಗಳಾಗಿದ್ದು, ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ನಿರಂತರ ಚಿಕಿ ..ತ್ಸೆ ನೀಡಿದರೂ ,ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿ ..ತ್ಸೆಗಾಗಿ ಶೂನ್ಯ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್ ಕರೆಸಿದ್ದರು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯ ಲೀಲೆ ಹರ್ಷಬರ್ಧನ್ ಪ್ರಾಣಪಕ್ಷಿ ಹಾರಿಹೋಯಿತು.
ವರದಿ ಪರ್ವಿಜ್ ಅಹಮದ್ ಹಾಸನ