ಸಾಲಿಗ್ರಾಮ: ಸಾಲಿಗ್ರಾಮ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಾ.ದಳ ಬೆಂಬಲಿತ ಅಭ್ಯರ್ಥಿ ಸತೀಶ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಕರುಣ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸತೀಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸತೀಶ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಗಿರೀಶ್ ಘೋಷಣೆ ಮಾಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಎಸ್. ಬಿ. ಅಶೋಕ್, ಪಾಪಣ್ಣ, ಸತೀಶ್, ಮಹೇಶ್, ಅನಂತ, ಅಶ್ವಿನಿ, ಚಂದ್ರ ನಾಯಕ, ಯಮ್ಮ, ಸುರೇಶ, ಜಯರಾಮು, ರುಕ್ಕಿಣಿ ಸಣ್ಣದೇವಮ್ಮ, ಸಿಇಒ ಸಿಬ್ಬಂದಿಗಳಾದ ಮಧು, ಶಶಿಕುಮಾರ್ ಭಾಗವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ನೂತನ ಅಧ್ಯಕರನ್ನು ಅಭಿನಂದಿಸಿ ನೂತನ ಅಧ್ಯಕ್ಷರು ಸಂಘದ ವತಿಯಿಂದ ರೈತರಿಗೆ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದು ಸಲಹೆ ನೀಡಿದರು. ಜಾ.ದಳ ತಾಲ್ಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್.ಕೆ.ಮಧುಚಂದ್ರ, ಕುಪ್ಪಳ್ಳಿ ಸೋಮಶೇಖರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಸ್.ಆರ್. ಪ್ರಕಾಶ್, ಪುರುಷೋತ್ತಮ್, ಸದಸ್ಯರಾದ ಗಂಗಾಧರ್, ಹರೀಶ್, ಮಾಜಿ ಸದಸ್ಯ ರಾದ ಅಯಾಜ್ ಅಹ್ಮದ್ ಉಪಸ್ಥಿತರಿದ್ದರು.
