ಕೊಡಗು:ಕುಶಾಲನಗರ ತಾಲೂಕಿನ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ವತಿಯಿಂದ ಆರೋಗ್ಯ ರಕ್ಷಾ ಸಮಿತಿ ಸಭೆ ಹಾಗೂ ದೆಂಗೆ ಮಾಸಾಚಾರಿಯನ್ನು ನಡೆಸಲಾಯಿತು. ಆಡಳಿತ ವೈದ್ಯಧಿಕಾರಿಯಾದ ಡಾಕ್ಟರ್ ದರ್ಶನ್ ರವರು ಆರೋಗ್ಯ ಕೇಂದ್ರದ ಕುಂದುಕೊರತೆಯನ್ನು ಚರ್ಚಿಸಿದರು. ಎಚ್ ಪಿ ವಿ ಲಸಿಕೆ ಬಗ್ಗೆ ಹಾಗೂ ಪಲ್ಸ್ ಪಾಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯದ ಡಾಕ್ಟರ್ ಸಾನಿಯಾ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ಗರ್ಭಿಣಿ ಆಗಿರುವ ಬಗ್ಗೆ ಮತ್ತು ಪೊಕ್ಸೋ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಬಗ್ಗೆ ಮಾಹಿತಿಯನ್ನು ನೀಡುತ್ತಾ ಗರ್ಭಿಣಿಯಾರ ಆರೈಕೆ ಬಗ್ಗೆ ಮಾಹಿತಿಯನ್ನು ನೀಡಿದರು. ಸಮಾರಂಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಆರೋಗ್ಯ ನಿರೀಕ್ಷಕರದ ಸಂಜಯ್, ಬಸವರಾಜು, ಶರ್ಮಿಷ್ಟ, ಶೀಲಾ ತೇಜಸ್ವಿನಿ, ಅಮೃತ, ಕವಿತಾ, ಚಂದ್ರಶೇಖರ್, ನಾಗೇಂದ್ರ ಚಾರಿ, ನಂದೀಶ್ ಮುಂತಾದವರ ಹಾಜರಿದ್ದರು.
