ಕಾಪು: ಕಾಪು ವಿಧಾನ ಸಭಾ ಕ್ಷೆತ್ರ ಯುವ ಕಾಂಗ್ರೆಸ್ ಸಮಿತಿ ದಕ್ಷಿಣ, ಉತ್ತರ, ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ
ಶನಿವಾರ ಕಾಪು ವಿಧಾನ ಸಭಾ ಕ್ಷೆತ್ರ ಯುವ ಕಾಂಗ್ರೆಸ್ ಸಮಿತಿ ದಕ್ಷಿಣ, ಉತ್ತರ ಪದಗ್ರಹಣ ಸಮಾರಂಭವು ರಾಜೀವ ಭವನದಲ್ಲಿ ಮಹಮ್ಮದ್ ನಿಯಾಝ್ ಗೌರೀಶ್ ಕೋಟ್ಯಾನ್ ಶರತ್ ನಾಯ್ಕ್ ನೂತನ ಅಧ್ಯಕ್ಷರುಗಳಿಗೆ ಕಾಂಗ್ರೆಸ್ ಪಕ್ಷ ಧ್ವಜ ಹಸ್ತಾಂತರದ ಮಾಡುವ ಮೂಲಕ ಚಾಲನೆ ದೊರಕಿತು.. ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿ ಅವರು ರಾಜಕೀಯ ಪಕ್ಷವು ಹರಿಯುವ ನೀರಿನಂತೆ ಇರಬೇಕು ನಿರಂತರವಾಗಿ ನೀರು ಹರಿದು ಬರುವಂತಹ ರೀತಿಯಲ್ಲಿ ಯುವಕರು ಪಕ್ಷಕ್ಕೆ ಸೇರ್ಪಡೆ ಆಗಬೇಕು 100 ರಲ್ಲಿ ಶೇ80ರಷ್ಟು ಯುವಕರು ಏನ್ ಎಸ್ ಯು ಐ ಮತ್ತು ಯೂತ್ ಕಾಂಗ್ರೆಸ್ ನಿಂದ ಬಂದವರೇ ನಾಯಕರಾಗಿದ್ದಾರೆ ಶೇ.40 ರಷ್ಟು ಯುವಕರ ಸೇರ್ಪಡೆಯಾದಾಗ ಮಾತ್ರ ಪಕ್ಷ ಬೆಳವಣಿಗೆ ಸಾಧ್ಯ. ದೇಶದ ಸಂವಿಧಾನ ನಮ್ಮ ಸಿದ್ಧಾಂತ. ಬಿಜೆಪಿಯಿಂದ ಸಂವಿಧಾನದ ಮೂಲ ಅಂಶ ಸಮಾಜವಾದಿ, ಜಾತ್ಯಾತೀತ ತೆಗೆದು ಹಾಕಲು ಚಿಂತನೆಯಾಗಿದೆ. ಸಂವಿಧಾನಕ್ಕೆ ಧಕ್ಕೆ ಬಂದರೆ ನಾವೆಲ್ಲರೂ ವಿರೋಧಿಸಲು ಅಣಿಯಾಗಬೇಕಿದೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮಾತನಾಡಿ, ಯುವ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಕಾಂಗ್ರೆಸ್ ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಪಕ್ಷದೆಡೆ ಆಕರ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಯು ಕಾಂಗ್ರೆಸ್ ತಂಡವನ್ನು ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಉತ್ತರ ಇದರ ಅಧ್ಯಕ್ಷ ರಾದ ಶರತ್ ನಾಯ್ಕ್ ಮಾತನಾಡಿ ಯೂತ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ವನಮಹೋತ್ಸವ ರಾಹುಲ್ ಗಾಂಧಿಯ ಜನ್ಮ ದಿನದ ಪ್ರಯುಕ್ತ 10 ನೇ ತರಗತಿ ಯ ಪಡುಬಿದ್ರಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಪುಸ್ತಕಗಳು ಮುಂದಿನ ದಿನಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳು ನಾಯಕರಾದ ವಿನಯ್ ಕುಮಾರ್ ಸೊರಕೆಯವರ ಮಾರ್ಗದರ್ಶನ ದಲ್ಲಿ ಮಾಡಲಾಗುವುದು ಎಂದು ತಿಳಿಸದರು ಮಹಮ್ಮದ್ ನಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕಾಪು ಬ್ಲಾಕ್ (ದ) ಅಧ್ಯಕ್ಷ ವೈ. ಸುಕುಮಾರ್, ಕಾಪು ಬ್ಲಾಕ್ (ಉ)ಅಧ್ಯಕ್ಷ ಸಂತೋಷ್ ಕುಲಾಲ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ನವೀನ್ ಸುವರ್ಣ, ಕಾಪು ದಿವಾಕರ ಶೆಟ್ಟಿ, ಅರ್ಜುನ್, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಹಸನಬ್ಬ ಶೇಕ್, ರಮೀಝ್ ಹುಸೇನ್, ವಿಶ್ವಾಸ್ ಅಮೀನ್, ಅಝೀಝ್, ನವೀನ್ ಎನ್ ಶೆಟ್ಟಿ, ದೀಪಕ್ ಕೋಟ್ಯಾನ್, ಹರೀಶ್ ಕಿಣಿ, ಗಣೇಶ್ ಕೋಟ್ಯಾನ್ ಪ್ರಭಾಕರ ಆಚಾರ್ಯ ವೈ ಸುಧೀರ್ ಕುಮಾರ್ ದೀಪಕ್ ಕುಮಾರ್ ದೇವರಾಜ್ ಕಾಪು ಬಾಬಣ್ಣ ನಾಯಕ್ ಉಪಸ್ಥಿತರಿದ್ದರು.
