ಹಿರೇಗುತ್ತಿ ಹೈಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಹಾಗೂ ಶಿಕ್ಷಕಿಯಾದ ಶ್ರೀಮತಿ ಇಂದಿರಾ ಬಿ ನಾಯಕ ಹಾಗೂ ಬಿಸಿಯೂಟದ ಸಿಬ್ಬಂದಿ ದೀಪಾ ಪೆಡ್ನೇಕರ್ರವರ ಬಿಳ್ಕೋಡುಗೆ ಸಮಾರಂಭ.
ಗೋಕರ್ಣ: ಸಮೀಪದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಕಳೆದ ೩೩ ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಹಾಗೂ ಸಹಶಿಕ್ಷಕಿಯಾದ ಶ್ರೀಮತಿ ಇಂದಿರಾ ಬಿ ನಾಯಕ, ದೀಪಾ ಪೆಡ್ನೆಕರ್ ರವರ ಬಿಳ್ಕೋಡುವಿಕೆ ಸಮಾರಂಭ ಜರುಗಿತು.
ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಹಾಗೂ ಸಹಶಿಕ್ಷಕಿಯಾದ ಶ್ರೀಮತಿ ಇಂದಿರಾ ಬಿ ನಾಯಕ, ದೀಪಾ ಪೆಡ್ನೆಕರ್ ಇವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಮುಖ್ಯಾಧ್ಯಾಪಕ ರೋಹಿದಾಸ. ಎಸ್. ಗಾಂವಕರ ಮಾತನಾಡಿ “ಶಾಲಾ ಆಡಳಿತ ಮಂಡಳಿ, ಹೈಸ್ಕೂಲ್ ಶಿಕ್ಷಕ ವೃಂದದವರು ಹಾಗೂ ಪಾಲಕ ಪೋಷಕರ ಸಹಕಾರದಿಂದ ಉತ್ತಮ ಆಡಳಿತ ನಡೆಸಲು ಸಾಧ್ಯವಾಯಿತು. ನನಗೆ ಸಹಕರಿಸಿದ ಆಡಳಿತ ಮಂಡಳಿ ಹಾಗೂ ಸರ್ವರಿಗೂ ತುಂಬಾ ಆಭಾರಿಯಾಗಿದ್ದೇನೆ ಎಂದರು.
ಸನ್ಮಾನಿತರಾಗಿ ಮಾತನಾಡಿದ ಇಂದಿರಾ ಬಿ ನಾಯಕ ಹಿರೇಗುತ್ತಿ ಹೈಸ್ಕೂಲಿನಲ್ಲಿ ಕಾರ್ಯನಿರ್ವಹಿಸಲು ಸಹಾಯ ಸಹಕಾರ ನೀಡಿದ ತಮ್ಮ ತಂದೆ-ತಾಯಿರವರಿಗೆ, ಶಾಲಾ ಆಡಳಿತ ಮಂಡಳಿರವರಿಗೆ, ಮುಖ್ಯಾಧ್ಯಾಪಕರಿಗೆ, ಶಿಕ್ಷಕವೃಂದದವರಿಗೆ, ಸಿಬ್ಬಂದಿಗಳಿಗೆ, ಊರ ನಾಗರಿಕರಿಗೆ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿ ವೃಂದದವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾತ್ಮಗಾಂಧಿ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ “ರೋಹಿದಾಸ ಗಾಂವಕರ ಹಾಗೂ ಇಂದಿರಾ ನಾಯಕರವರ ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಪಠ್ಯೇತರ ಚಟುವಟಿಕೆಗಳ ಪ್ರಗತಿಯ ಜೊತೆಗೆ ಶಾಲೆಯ ಶ್ರೇಯೋಭಿವೃಧ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಹಾಗೂ ಅಡಿಗೆ ಸಿಬ್ಬಂದಿ ದೀಪಾ ಪೆಡ್ನೆಕರ್ ಕಳೆದ ೨೮ ವರ್ಷಗಳಿಂದ ವಿದ್ಯಾರ್ಥಿಗಳಿಗೆ ರುಚಿಕಟ್ಟಾದ ಬಿಸಿಯೂಟ ಊಣಬಡಿಸಿದ್ದಾಳೆ. ಇವರೆಲ್ಲರ ನಿವೃತ್ತಿ ಜೀವನ ಇನ್ನಷ್ಟು ಕ್ರೀಯಾಶೀಲವಾಗಿರಲೆಂದು ಶುಭ ಹಾರೈಸಿದರು.”
ಎನ್.ಟಿ ನಾಯಕರವರು ಮಾತನಾಡಿ “ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಇಂದೂ – ಎಂದೂ ಕಲಿಸಿದ ಗುರುಗಳನ್ನು, ಸಹಕಾರ ಗುಣವನ್ನು ನೆನಪಿಸುತ್ತಾರೆ” ಎಂದರು.
ಶಿಕ್ಷಕರಾದ ಬಾಲಚಂದ್ರ ರಾಮಾ ನಾಯಕ ಮಾತನಾಡಿ “ರೋಹಿದಾಸ ಗಾಂವಕರ ಹಾಗೂ ಇಂದಿರಾ ನಾಯಕರವರ ಬದುಕು ಹಾಗೂ ಅನುಭವಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿರಲಿ ಎಂದು ಹೃದಯ ಪೂರ್ವಕವಾಗಿ ಹಾರೈಸಿದರು”.
ಸರ್ವರನ್ನೂ ಸ್ವಾಗತಿಸಿ ಮಾತನಾಡಿದ ಶಿಕ್ಷಕ ವಿಶ್ವನಾಥ ಬೇವಿನಕಟ್ಟಿ – ರೋಹಿದಾಸ ಗಾಂವಕರ ಕೆಲಸ ಮಾಡುವ ರೀತಿ, ಚಾಕಚಕ್ಯತೆ, ದೃಢಸಂಕಲ್ಪ ಇವರಿಗೆ ರಕ್ತಗತವಾಗಿ ಬಂದಿದೆ. ಅದೇ ರೀತಿ ಇಂದಿರಾ ನಾಯಕ ಹಿಂದಿ ಶಿಕ್ಷಕಿಯಾಗಿ ಉತ್ತಮ ಬೋಧನೆ ಮಾಡಿದ್ದಾರೆ ಹಾಗೂ ದೀಪಾ ಪೆಡ್ನೆಕರ್ ಉತ್ತಮ ಅಡುಗೆ ಸೇವೆ ಮಾಡಿದ್ದಾರೆ ಇವರೆಲ್ಲರ ವಿಶ್ರಾಂತಿ ಜೀವನ ಶುಭದಾಯಕವಾಗಲಿ ಎಂದರು.
ಹಿರೇಗುತ್ತಿ ಕಾಲೇಜ್ ಉಪನ್ಯಾಸಕ ವೃಂದದವರು ಹಾಗೂ ಸರಕಾರಿ ಪ್ರೌಢಶಾಲೆ ನಾಡುಮಾಸ್ಕೇರಿ ಮುಖ್ಯಾಧ್ಯಾಪಕಿ ಪ್ರಿಯಾ ಡಿ ನಾಯಕ ರೋಹಿದಾಸ ಗಾಂವಕರ ಹಾಗೂ ಇಂದಿರಾ ನಾಯಕರನ್ನು ಗೌರವಿಸಿ ಸನ್ಮಾನಿಸಿದರು.
ಶಾಲೆಯ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಅವರ ಅನಸಿಕೆ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿಯ ಕಾರ್ಯದರ್ಶಿ ಮೋಹನ ಬಿ ಕೆರೆಮನೆ, ಆನಂದಾಶ್ರಮ ಪ್ರೌಢಶಾಲೆ ಬಂಕಿಕೊಡ್ಲ ಮುಖ್ಯಾಧ್ಯಾಪಕರಾದ ಗಂಗಾಧರ ಭಟ್ಟ್, ರತ್ನಾ ನಾಯಕ ತಲಗೇರಿ, ಹೊನ್ನಪ್ಪ ನಾಯಕ, ವೆಂಕಟ್ರಾಯ ನಾಯಕ, ಆನಂದ ನಾಯಕ, ಸವಿತಾ ನಾಯಕ, ಉಲ್ಲಾಸ ಪೆಡ್ನೇಕರ್, ಸುಧಾಕರ ಭಂಡಾರಿ, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ನಾಗರಾಜ ಜಿ. ನಾಯಕ, ಕವಿತಾ ದಿವಗಿ, ಮದನ ನಾಯಕ, ಭರತ್ ಭಟ್ಟ್, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಎನ್.ಜಿ.ಶರತ್, ಪ್ರಜ್ವಲ್ ಶಶಿಹಿತ್ತಲ್, ಕಾತ್ಯಾಯಿನಿ ನಾಯ,್ಕ ಸೃಷ್ಟಿ ನಾಯಕ ಉಪಸ್ಥಿತರಿದ್ದರು. ಸಿಂಧು ಸಂಗಡಿಗರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕರಾದ ಶ್ರೀಮತಿ ಶಿಲ್ಪಾ ವಿ ನಾಯಕ ಶ್ರೀ ರೋಹಿದಾಸ ಗಾಂವಕರರ ಹಾಗೂ ಜಾನಕಿ ಎಮ್ ಗೊಂಡ ಶ್ರೀಮತಿ ಇಂದಿರಾ ಬಿ ನಾಯಕರ ಪರಿಚಯ ಭಾಷಣ ಮಾಡಿದರು. ಎನ್. ರಾಮು ಹಿರೇಗುತ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು.
