ನೌಕರರನ್ನು ತಯಾರು ಮಾಡುವ ಶಿಕ್ಷಣ ನಮಗೆ ಬೇಡ ಮಾಲೀಕರನ್ನು ತಯಾರುಮಾಡುವ ಶಿಕ್ಷಣ ನಮ್ಮದಾಗಲಿ, ಶ್ರೀ ಹರ್ಷಾನಂದ ಮಹಾಸ್ವಾಮಿಗಳು.
ಯಾದವಾಡ . ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಕೊಪದಟ್ಟಿ, 7 ನೇಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕ್ರತಿಕ ಸೌರಭ-2025 ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹರ್ಷಾನಂದ ಮಹಾಸ್ವಾಮಿಗಳು ಶ್ರೀ ಗುರುದೇವಾಶ್ರಮ ಹುಲ್ಯಾಳ ಯಾವ ದೇಶ ಶಿಕ್ಷಣಕ್ಕೆ ಮಹತ್ವ ನೀಡುತ್ತದೆಯೋ ಆ ದೇಶಕ್ಕೆ ಬೆಲೆ ಜಾಸ್ತಿ . ನಮ್ಮ ಭಾರತ ಪುರಾತನ ಕಾಲದಿಂದಲೂ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಮಹತ್ವವನ್ನು ನೀಡುತ್ತಾಬಂದಿದೆ ನಮ್ಮಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ಜಾರಿಯಲ್ಲಿತ್ತು ತಕ್ಷಶೀಲಾ ಮತ್ತು ನಳಂದಾ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿದ್ದವು . 64 ವಿದ್ಯೆಗಳನ್ನು ವಿದ್ಯಾಲಯಗಳಲ್ಲಿ ಕಲಿಸುತ್ತಿದ್ದರು. ನಮ್ಮ ದೇಶದಲ್ಲಿ ಶಿಕ್ಷಣವನ್ನು ಪಡೆಯಲು ವಿದೇಶಗಳಿಂದ ಜನರು ಬರುತ್ತಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ನಾವು ಬಂಗಾರ , ತಾಮ್ರ , ಹಿತ್ತಾಳಿ, ಕಂಚು, ತಯಾರು ಮಾಡುವ ಕಲೆ ನಮ್ಮಲ್ಲಿತ್ತು. ಯುದ್ದ ಕಲೆ, ಕಂಬಾರಿಕೆ , ಕುಂಬಾರಿಕೆ , ಚಮ್ಮಾರಿಕೆ, ಶಸ್ತ್ರಾಸ್ತ್ರ ತಯಾರು ಮಾಡುವುದು ವಿವಿದ ರೀತಿಯ ಕಲೆಗಳು ನಮ್ಮ ದೇಶದಲ್ಲಿದ್ದವು ನಾವು ಮಾಲೀಕರಂತೆ ಬದುಕುತ್ತಿದ್ದೇವು. ನಮ್ಮ ಶಿಕ್ಷಣ ಪದ್ದತಿಯಿಂದ ಜನ ಸ್ವಾವಲಂಬಿಗಳಾಗಿ ಜೀವನವನ್ನು ನಡೆಸುತ್ತಿದ್ದರು ಯಾವಾಗ ಹೊರದೇಶದವರ ಶಿಕ್ಷಣ ನಮ್ಮ ದೇಶದಲ್ಲಿ ಬಂದಿತು ಆಗ ನಮ್ಮ ಶಿಕ್ಷಣ ಪದ್ದತಿ ಸಂಪೂರ್ಣವಾಗಿ ಹಾಳಾಯಿತು. ವಿದೇಶಿಯರ ಶಿಕ್ಷಣ ನಮ್ಮ ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ. ನೌಕರಿ ಮಾಡುವ ಸಲುವಾಗಿ ಶಿಕ್ಷಣವನ್ನು ಕಲೆಯುವಂತಾಗಿದೆ ಎಂದರು ನಮ್ಮ ತಾಯಿಂದರು ಜಾಗರೂಕ ಆಗಬೇಕು ಮಕ್ಕಳನ್ನು ನೌಕರಿಯ ಸಲುವಾಗಿ ವಿದ್ಯಾಭ್ಯಾಸಕ್ಕೆ ಕಳಿಸಬಾರದು ಅವರನ್ನು ಸ್ವಂತ ಉದ್ಯೊಗ ಮಾಡುವಂತೆ ಪ್ರೇರೆಪಿಸಬೇಕು . ಅವರನ್ನು ನೂರಾರು ಜನರಿಗೆ ಉದ್ಯೋಗ ಕೊಡುವ ವ್ಯಾಪಾರಸ್ಥರನ್ನಾಗಿ ತಯಾರು ಮಾಡಬೇಕು ಮಾಲೀಕರಂತೆ ಬದುಕುವುದನ್ನು ಕಲಿಸಬೇಕು ಎಂದರು. ಯಾದವಾಡ ಗ್ರಾಮದ ಸರ್ಕಾರಿ ಶಾಲೆ ಎಲ್ಲ ರೀತಿಯ ವಿದ್ಯಾಭ್ಯಾಸವನ್ನು ಮಕ್ಕಳಿಗೆ ಕಲಿಸಿಕೊಡುತ್ತಿದೆ ಖಾಸಗಿ ಶಾಲೆಯ ಶಿಕ್ಷಣಕ್ಕೆ ಸೆಡ್ಡು ಹೊಡೆದು ಮಕ್ಕಳನ್ನು ಆಟ, ಪಾಠ , ಸಾಂಸ್ಕ್ರತಿಕ ಸಾಮಾಜಿಕವಾಗಿ ಬೆಳೆಯುವಂತೆ ಮಾಡುತ್ತಿದೆ ಎಂದು ಪರಮಪುಜ್ಯರು ಹೇಳಿದರು.
ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಎ.ಸಿ.ಮಣ್ಣಿಕೇರಿ ಮಾತನಾಡಿ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ಭವಿಷ್ಯವನ್ನು ಎಷ್ಟು ಎತ್ತರಕ್ಕೆ ಬೇಕಾದರೂ ಒಯ್ಯಬಲ್ಲರು ಎನ್ನುವುದಕ್ಕೆ ಕೊಪದಟ್ಟಿ ಶಾಲೆಯ ಮುಖ್ಯೋಪಾದ್ಯಯರು ಮತ್ತು ಶಿಕ್ಷಕರು ಮಾದರಿ ಉದಾಹರಣೆ ಎಂದರು ವಿಷೇಷವಾಗಿ ಸರ್ಕಾರಿ ಶಾಲೆಯಲ್ಲಿ ಆಪಾದನೆಗಳು ಅಪವಾದಗಳು ಸಹಜ ಇಂತಹ ಸನ್ನಿವೇಷಗಳಲ್ಲಿ ಇಂತಹ ಮಾದರಿ ಶಾಲೆಯ ಉದಾಹರಣೆಯನ್ನು ಕೊಡಲು ನನಗೆ ಹೆಮ್ಮೆ ಅನಿಸುತ್ತದೆ. ವಿಷೇಷವಾಗಿ ಕೊಪದಟ್ಟಿ ಗ್ರಾಮದ ಎಸ್.ಡಿ.ಎಮ್.ಸಿ. ಸದಸ್ಯರನ್ನು ಮತ್ತು ಗ್ರಾಮದ ಪ್ರಮುಖರನ್ನು ನಾನು ಅಭಿನಂದಿಸುತ್ತೆನೆ ಇವರು ಸದಾ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಿಮ್ಮ ಸಹಾಯ ಸಹಕಾರ ಹೀಗೆ ಇರಲಿ ಎಂದು ಕೋರಿದರು.
ಶಾಲಾ ಕ್ರೀಡಾಕೂಟದಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕ್ವೀಜಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೊತ್ಸಾಹಿಸಲಾಯಿತು. ಮಕ್ಕಳು ಹಾಡು , ನೃತ್ಯ ರಸಮಂಜರಿ ಕಾರ್ಯಕ್ರಮಗಳನ್ನು ಮಾಡಿ ನೆರೆದಿದ್ದ ಸಭೀಕರನ್ನು ಮನರಂಜಿಸಿದರು. ಶಾಲೆಯ ವ್ಯವಸ್ಥಾಪಕ ಮಂಡಳಿಯವರು ಕಾರ್ಯಕ್ರಮ ವೀಕ್ಷಿಸಲು ಬಂದ ಎಲ್ಲ ಪಾಲಕರಿಗೆ ಮತ್ತು ಅತಿಥಿಗಳಿಗೆ ಭೋಜನದ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪಜ್ಜ ಹುಬ್ಬಳ್ಳಿ, ಶ್ರೀಮತಿ ಶಾಂತವ್ವ ತಿ. ಮೋಡಿ, ನಿಂಗಪ್ಪ ಹ. ಉದಪುಡಿ , ಶ್ರೀಮತಿ ಸುವರ್ಣ ಸ. ಮೂಲಿಮನಿ , ಶ್ರೀ. ಎ.ಸಿ.ಮನ್ನಿಕೇರಿ, ಶ್ರೀಮತಿ ರೇಣುಕಾ ಅನಿ, ಶ್ರೀ ಗೋವಿಂದ ಬ. ಉದಪುಡಿ, ಶ್ರೀಮತಿ ಮಹಾದೇವಿ ಬ. ಸಂಗಟಿ, ಶ್ರೀ ನಿಂಗನಗೌಡ ಬ. ಪಾಟೀಲ , ಶ್ರೀ ವಿ.ಆಯ್.ಮಿಲಾನಟ್ಟಿ , ಎಸ್.ಡಿ.ಎಮ್.ಸಿ. ಸದಸ್ಯರು ಶಾಲೆಯ ಶಿಕ್ಷಕವೃಂದ ಮತ್ತು ಕಾಮನಕಟ್ಟಿ ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು ಸ್ವಾಗತ ಭಾಷಣವನ್ನು ಮುಖ್ಯ ಶಿಕ್ಷಕರಾದ ವಿ.ಆರ್ ಬರಗಿ ಗುರುಗಳು ಮಾಡಿದರು , ನಿರುಪಣೆಯನ್ನು ಜಗದೀಶನಾಯಕಜಿ ಮಾಡಿದರು . ವಂದನಾರ್ಪಣೆಯನ್ನು ಎಸ್ ಎಸ್ ಮುರಕಟನಾಳ ಗುರುಗಳು ನೆರವೆರಿಸಿದರು.