ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಾ ಪಂಚಾಯಿತ ಸಭಾ ಭವನದಲ್ಲಿ ಕೆ ಡಿ ಪಿ ಸಾಮಾನ್ಯ ಸಭೆ ನಡೆಯಿತು, ವಿಧಾನಸಭಾ ಕ್ಷೇತ್ರದ ಶಾಸಕರು ಕರ್ನಾಟಕ ರಾಜ್ಯ ಮುಖ್ಯ ಸಚೇತಕರಾದ ಶ್ರೀ ಅಶೋಕ್ ಮ. ಪಟ್ಟಣ್ಣ ಅವರು ಮೊದಲನೆಯದಾಗಿ ಶಾಸಕರ ಭವನ ಆವರಣದಲ್ಲಿ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಯ ಕಾರ್ಯಕ್ರಮ ಮುಗಿಸಿ ಬರುತ್ತಿದ್ದಂತೆ, ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕಾ ದಂಡಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಶಾಸಕರ ಸಭಾಗಿತ್ವದಲ್ಲಿ ಸಭೆ ನಡೆಯಿತು, ಸಭೆಯಲ್ಲಿ ಅಧಿಕಾರಿಗಳು ಸರದಿಯಂತೆ ತಮ್ಮ ಕಚೇರಿಯ ಮಾಹಿತಿ ಹೇಳುತ್ತಿದ್ದರು, ಆದರೆ ಕೆಲವು ಅಧಿಕಾರಿಗಳು ಸರಿಯಾಗಿ ತಮ್ಮ ಕಚೇರಿ ಹೆಸರು ಹೇಳದೆ ಮಾಹಿತಿ ಸರಿಯಾಗಿ ನೀಡದಿದ್ದಾಗ ಶಾಸಕರು ಅವರನ್ನು ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆಯಿಂದ ರೈತರಿಗೆ ಕೊಡುವ ಸೌಲಭ್ಯ, ಮತ್ತು ಕೆಇಬಿ ಅವರಿಂದ ರೈತರಿಗೆ ವಿದ್ಯುತ್ ಪೂರೈಸುವುದು ಮತ್ತು ಸೋಲಾರ್ ಪಂಪ್ ಸೆಟ್ ಮಾಡೋದು ಹಾಗೆ ಆಹಾರ ಇಲಾಖೆಯಿಂದ ಹಣದ ಬದಲಿಗೆ ಅಕ್ಕಿ ಕೊಡುವುದು, ಸಾರಿಗೆ ಇಲಾಖೆಯಿಂದ ಬಸ್ಸಿನ ವ್ಯವಸ್ಥೆ, ಅರಣ್ಯ ಇಲಾಖೆಯಿಂದ ಗಿಡ ಹಚ್ಚುವುದು ಉಚಿತ ರೈತರಿಗೆ ಸಸಿ ನೀಡುವುದು, ಬಿಸಿಎಂ ಇಲಾಖೆಯಿಂದ ವಸತಿ ನಿಲಯದ ಮಕ್ಕಳಿಗೆ ಕೊಡುವ ಸೌಲಭ್ಯಗಳನ್ನು ಪ್ರಸ್ತಾಪಿಸಿದರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ಶಿಕ್ಷಣ ಮತ್ತು ಪರೀಕ್ಷೆ ವಿಚಾರ ಕುಡಿಯುವ ನೀರಿನ ವಿಚಾರವಾಗಿ ಹಾಗೂ ಅರಣ್ಯ ಇಲಾಖೆಯವರು ಚಿಲಮೂರು ಗ್ರಾಮದ ಕನ್ನಡ ಶಾಲೆಯ ಕಟ್ಟಡ ಸಮಸ್ಯೆ ಮತ್ತು ಇನ್ನಿತರ ವಿಚಾರಗಳನ್ನು ಹೇಳಿದರು, ಇದು ಕೆಡಿಪಿಯ ಸಾಮಾನ್ಯ ಸಭೆಯ ವಿಚಾರವಾದರೆ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ರೈತರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಸರಕಾರಿಯ ಕಚೇರಿಯಿಂದ ಸಿಗುವಂತ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ, ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಕೆಲಸವನ್ನು ಸರಕಾರಿ ಅಧಿಕಾರಿಗಳು ಹೆಚ್ಚು ಮಾಡುತ್ತಾರೆಂದು ಸಾರ್ವಜನಿಕರ ಅನಿಸಿಕೆಯಾಗಿದೆ, ಈ ಸಭೆಯಲ್ಲಿ ಹೇಳಿದ ಕೆಲವು ಸೌಲಭ್ಯಗಳು ಸಾರ್ವಜನಿಕರಿಗೆ ರೈತರಿಗೆ ತಿಳಿದಿರುವುದಿಲ್ಲ, ಇಂತಹ ಸೌಲಭ್ಯಗಳು ರೈತರ ಮತ್ತು ಸಾರ್ವಜನಿಕರ ಮನೆ ಮನೆ ಬಾಗಿಲಿಗೆ ಮುಟ್ಟವಂತಾಗ ಬೇಕಾಗಿದೆ,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ