ಇಂಡಿ : ಪ್ರಾಮಾಣಿಕರ, ಬಡವರ, ಹಿಂದೂಪರ ಹೋರಾಟಗಾರ. ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ವಿಷಯ ನಮ್ಮ ಮನಸ್ಸಿಗೆ ಅತಿವ ನೋವುಂಟು ಮಾಡಿದ್ದು, ಇದನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇದನ್ನು ಖಂಡಿಸಿ ವಿರೋಧಿಸುತ್ತೆನೆ ಎಂದು ಶ್ರೀಧರ ಕ್ಷೇತ್ರಿ ಹೇಳಿದರು.
ಅವರು ಇಂದು ಇಂಡಿ ನಗರದಲ್ಲಿ ಶ್ರೀ ಬಸವೇಶ್ವರ ವೃತ್ತದ ಬಳಿ ನೂರಾರು ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಿಜೆಪಿಗೆ ಹಿಂದುತ್ವ ನಾಯಕರು ಬೇಡ ಅಡ್ಜಸ್ಟಮೆಂಟ್ ಮಾಡಿಕೊಳ್ಳುವ ನಾಯಕರು ಬೇಕು, ನೇರ, ಶುದ್ಧ ವ್ಯಕ್ತಿಗಳು ಬೇಡ, ಹನಿಟ್ರ್ಯಾಪ ಆಗುವವರು ಬೇಕು.
ರಾಜ್ಯದ ರಕ್ಷಣೆಗೆ ಬದ್ಧರಾಗಿರುವವರು ಬೇಡ, ರಾಜ್ಯ ಲೂಟಿ ಹೊಡೆಯುವುದು ಬೇಕು, ಹಿಂದೂಗಳು ಸಂಪೂರ್ಣ ಬೆಂಬಲ ನೀಡುವ ಬಿಜೆಪಿಗೆ ಹಿಂದೂ ನಾಯಕರ ಬೆಳವಣಿಗೆ ಬೇಕಾಗಿಲ್ಲ.
ಅನಂತ್ ಕುಮಾರ್ ಹೆಗ್ಡೆ ಆಯ್ತು, ಪ್ರತಾಪ್ ಸಿಂಹ ಆಯ್ತು, ಈಶ್ವರಪ್ಪ ಹೋದರು.
ಅರುಣ್ ಕುಮಾರ್ ಪುತ್ತಿಲ್ ಹೋದರು. ಇನ್ನೆಷ್ಟು ಹಿಂದೂ ನಾಯಕರು ಬೇಕು ಬಿಜೆಪಿಗೆ ?
ಇಲ್ಲಿಗೆ ನಮ್ಮ ಹಿಂದುತ್ವದ ಕಾರ್ಯಕ್ಕೆ ಕೊನೆ ಮಾಡುವ ಸಮಯ ಬಂದಿದೆ ಅನಿಸುತ್ತಿದೆ ಯಾಕೆಂದರೆ ಹಿಂದೂ ಕಾರ್ಯಕರ್ತರ ಬೆನ್ನೆಲುಬು ಮುರಿಯುವ ಕೆಲಸ ನಡೆಯುತ್ತಿರುವಾಗ ನೋಡಿಯೂ ಸುಮ್ಮನೆ ಇದ್ದರೆ ನಮಗೆ ನಾಚಿಕೆ ಅನಿಸುತ್ತದೆ.
ಪ್ರತಿ ಒಬ್ಬ ಹಿಂದೂಗಳು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಹಿಂದೂ ನಾಯಕತ್ವ ಬೆಂಬಲಿಸಿ ಎಂದು ಹೇಳಿದರು.
ಈ ಘಟನೆಯಿಂದ ನನ್ನ ಮತ್ತು ನಮ್ಮ ಅಲ್ಪಸಂಖ್ಯಾತರ, ಮಂಡಲದ ಕಾರ್ಯಕರ್ತರ ಮನಸ್ಸಿಗೆ ಅತೀವ ನೋವು ಉಂಟಾಗಿದೆ. ಹಾಗೂ ಪಕ್ಷದಲ್ಲಿ ಹಲವಾರು ವರ್ಷದಿಂದ ಪಕ್ಷದ ಏಳಿಗೆಗಾಗಿ ಶ್ರಮಿಸಿದ ನಿಷ್ಠಾವಂತ ಹೋರಾಟಗಾರರಿಗೆ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ ಅಭಿಮಾನಿ ಬಳಗದ
ವಿನೋದ್ ಹಲಗಲ್, ಅಕ್ಷಯ್ ಪಾಟೀಲ್, ಆನಂದ್ ದೇವರ,
ರತನ್ ಹಲವಾಯಿ,
ಶರಣಗೌಡ ಬಂಡಿ, ನಾಗರಾಜ್ ದಶವಂತ್ ,ಅಂಬಣ್ಣ ಕವಟಗಿ, ಅಣ್ಣಪ್ಪ ಕೌಟಗಿ, ರವಿಗೌಡ ಪಾಟೀಲ, ಶಿವು ತಾಂಬೆ,
ಚಂದ್ರಶೇಖರ್ ದೇವರ, ಶಾಂತೇಶ್ ಕ್ಷತ್ರಿ, ಶಾಂತು ಪಸೋಡಿ, ಹರೀಶ್ ಆಳಂದಿಕರ, ಮಹೇಶ್ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
