ಜಮೀನಿಗೆ ನೀರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ, ಸಾವಿರಾರು ಟ್ರ್ಯಾಕ್ಟರಗಳ ಮೂಲಕ ನಾರಾಯಣಪುರದ ಬಸವ ಸಾಗರ ಜಲಾಶಯದವರೆಗೆ ಜಾತಾ.
ರೈತರ ಈ ಬೃಹತ್ ಪ್ರತಿಭಟನೆಯ ಮುಂದಾಳತ್ವವನ್ನ ಮಾಜಿ ಶಾಸಕರಾದ ರಾಜುಗೌಡ ನರಸಿಂಹ ನಾಯಕ್ ವಸಿಕೊಂಡಿದ್ದರು
ಪ್ರತಿಭಟಮೆಯಲ್ಲಿ ಬರೀ ರೈತರಷ್ಟೆ ಅಲ್ಲದೆ ಸ್ವಯಂ ಪ್ರೇರಿತರಾಗಿ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದು ವಿಶೇಷ, ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರು ಖುದ್ದಾಗಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಇನ್ನಷ್ಟು ಚುರುಕು ಮುಟ್ಟಿಸಿದ್ದಲ್ಲದೆ, ಡ್ಯಾಮಗೆ ಮುತ್ತಿಗೆ ಹಾಕಲು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರಿಗೆ ಕರೆ ನೀಡಿದರು,
ಸನ್ಮಾನ್ಯ ಮಾಜಿಶಾಕರಾದಂತ ರಾಜುಗೌಡ ನರಸಿಂಹ ನಾಯಕ ಅವರು ಮಾತನಾಡಿ, ರೈತರಿಗೆ ನೀರು ಕೊಡಿ ಇಲ್ಲಾ ವಿಷ ನೀಡಿ ಎಂದು ನೋವಿನಿಂದ ರಾಜ್ಯ ನೀರಾವರಿ ಸಚವರಿಗೆ ಕೈ ಜೋಡಿಸಿ ಮನವಿ ಮಾಡಿದರು, ಜೊತೆಗೆ ಇಷ್ಟು ಕೇಳಿಕೊಂಡರು ನೀರು ಬಿಡದಿದ್ದರೆ ಹೋರಾಟದ ಪರಿಣಾಮ ಭೀಕರವಾಗಿರುತ್ತದೆ ನನ್ನ ಭಾಗದ ರೈತರಿಗೆ ಅನ್ಯಾಯವಾದರೆ ಸಹಿಸಲಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ
ಹುಣಸಗಿ ಸುರಪುರ ಶಹಾಪುರ ರಾಯಚೂರು, ಕಲ್ಬುರ್ಗಿ ಜಿಲ್ಲೆಯ ಭಾಗದ ರೈತರ ಜಮಿನಿಗೆ ನೀರು ಹರಿಸುವ ಸಲುವಾಗಿ ಪ್ರತಿಭಟನೆ,
ಹೀಗಾಗಲೆ ಈ ಭಾಗದಲ್ಲಿ ಭತ್ತ ಮತ್ತು ಸಜ್ಜೆ ಇನ್ನಿತರ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನೂ ಹದಿನೈದು ದಿವಸಗಳವರೆ ಈ ಮೂರು ಜಿಲ್ಲೆಯ ರೈತರ ಜಮೀನಿಗೆ ನೀರು ಹರಿಸಿದಲ್ಲಿ ರೈತರು ಸಂಲಷ್ಟದಿಂದ ಪಾರಾಗುತ್ತಾರೆ, ನೀರು ಬಿಡದೆಯಿದ್ದ ಪಕ್ಷದಲ್ಲಿ ರೈತರು ಅಪಾರವಾದ ನಷ್ಟಕ್ಕೆ ಗುರಿಯಾಗುತ್ತಾರೆ
ಒಂದು ಹಂತದಲ್ಲಿ ರೈತರ ತೀವ್ರ ಪ್ರತಿಭಟನೆಗೆ ಇಳಿದಾಗ, ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆಯವರು ಆಣೆಕಟ್ಟನ್ನು ಮುತ್ತಿಗೆ ಹಾಕಲು ಕರೆ ನೀಡಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯ್ತು, ಈ ಸಂದರ್ಭದಲ್ಲಿ ಹಲವಾರು ರೈತರು ಕನ್ನಡಪರ ಸಂಘಟನೆಯ ಹೋರಾಟಗಾರು ಮುನ್ನುಗ್ಗಿ ಆಣೆಕಟ್ಟಿನತ್ತ ಸಾಗಿದಾಗ, ಪೋಲಿಸರು ಜನರನ್ನು ತಡೆಯಲು ಹರಸಾಹಸ ಮಾಡಬೇಕಾಯ್ತು,
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜುಗೌಡ ನರಸಿಂಹ ನಾಯಕ್ ಅವರನ್ನ ಹಾಗೂ ನಮ್ಮ ಕರ್ನಾಟಕ ಸೇನೆಯ ತಾಲ್ಲೂಕ ಯುವ ಘಟಕದ ಅಧ್ಯಕ್ಷರಾದ ಸಿದ್ದನಗೌಡ ಬಿರಾದಾರ ಮತ್ತು ಇನ್ನಿತರ ಮುಖಂಡರನ್ನ ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಇನ್ನೆರೆಡು ದಿನದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡುವ ಭರವಸೆ
ಈ ಸಂದರ್ಭದಲ್ಲಿ ತಾಲ್ಲೂಕ ಘಟಕದ ಅಧ್ಯಕ್ಷರಾದಂತ ಭೀಮನಗೌಡ ಪೋಲಿಸ್ ಪಾಟೀಲ ಬೆಲಾಪೂರ್, ಜಿಲ್ಲಾ ರೈತ ಘಟಕದ ಅಧ್ಯಕ್ಷರಾದಂತ ಎಮ್.ಬಿ.ಪಾಟೀಲ, ತಾಲ್ಲೂಕ ಯುವ ಘಟಕ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ತಾಲ್ಲೂಕ ರೈತ ಘಟಕದ ಅಧ್ಯಕ್ಷರಾದ ಸಂಗು ಸಾಲವಾಡಗಿ ವಜ್ಜಲ್, ಉಪಾಧ್ಯಕ್ಷರಾದ ಭೀಮನಗೌಡ ಮಾಲಿಪಾಟೀಲ ಕಡದರಾಳ, ಟಿ.ಪಿ.ಹೊಸಗೌಡರ ಸಿದ್ದಾಪುರ, ಕಾರ್ಮಿಕ ಮುಖಂಡರಾದ ಸಿದ್ದಣ್ಣ ಕುಂಬಾರ, ಅಮರೇಶ ನಾಯಕ,ನಗರ ಘಟಕ ಅಧ್ಯಕ್ಷರಾದ ರಾಜಶೇಖರ ದೇಸಾಯಿ, ಜಿಲ್ಲಾ ಗೌರವ ಅಧ್ಯಕ್ಷರಾದ ಮಹೇಶ ಕುಂಬಾರ,ಕರೆಪ್ಪಾ ದೊಡ್ಡಮನಿ,ಗದ್ದೆಪ್ಪ ಗುತ್ತಿಗೆದಾರರು, ಎಲ್ಲಾ ಪದಾಧಿಕಾರಿಗಳು ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ನೀಡಿದರು.