ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಒಂದು ಲಕ್ಷದ 50,000 ಸಾವಿರ ರೂಪಾಯಿ ಚೆಕ್ ನ್ನು ಪೂಜ್ಯಶ್ರೀ ಸ್ವಾಮೀಜಿಯವರು ಹಾಗೂ ಪ್ರದೀಪ್ ಪಟ್ಟಣ ರವರು ಮತ್ತು ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕರಾದ ಅಲೋಕ್ ಕುಮಾರ್ ಸಹಭಾಗಿತ್ವದಲ್ಲಿ, ನರಸಾಪುರ ಗ್ರಾಮದ ಕಟ್ಟೆ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಗ್ರಾಮದ ಗುರು ಹಿರಿಯರಿಗೆ 1,50,000 ಚೆಕ್ಕನ್ನು ಹಸ್ತಾಂತರ ಮಾಡಲಾಯಿತು, ರಾಮದುರ್ಗ ತಾಲೂಕಿನ ಶ್ರೀ ಪ್ರದೀಪ್ ಅಣ್ಣಾ ಪಟ್ಟಣ. ಅವರು ಮಾತನಾಡಿ ಧರ್ಮಸ್ಥಳ ಸಂಘವು ನಿಜವಾಗಿ ಗ್ರಾಮೀಣ ಅಭಿವೃದ್ಧಿ ಮಾಡುತ್ತದೆ ನಮ್ಮ ಹಳ್ಳಿಗಳಿಗೆ ಇ ಸಂಘದ ವರಿಂದ ಅನುಕೂಲ ಕರವಾಗಿದೆ ಎಂದರು,
ಪೂಜ್ಯ ಶ್ರೀ ಗಳು ಮಾತನಾಡಿ ನಮ್ಮ ಗ್ರಾಮೀಣ ರೈತರು ಹಾಗೂ ರೈತ ಮಹಿಳೆಯರು ಬ್ಯಾಂಕಿಗೆ ಸಾಲ ಹೇಳಲು ಹೋದರೆ ಸರಿಯಾಗಿ ಸಾಲ ಕೊಡುವುದಿಲ್ಲ ಸಾಲ ತೆಗೆದುಕೊಳ್ಳಬೇಕಾದರೆ ವರ್ಷವೇ ಗತಿಸಿ ಹೋಗುತ್ತದೆ, ಆದರೆ ಧರ್ಮಸ್ಥಳ ಸಂಘದವರು ನೇರವಾಗಿ ಗ್ರಾಮೀಣ ಜನರಿಗೆಲ್ಲ ಅನುಕೂಲ ವಾಗುವಂತೆ ಸಾಲ ಕೊಟ್ಟು ಸಾಲವನ್ನು ಸರಳ ರೀತಿಯಲ್ಲಿ ಮರುಪಾವತಿ ಮಾಡಿಕೊಳ್ಳುತ್ತಾರೆ, ಮತ್ತು ಗ್ರಾಮೀಣ ದೇವಸ್ಥಾನಕ್ಕೆ ಜೀರ್ಣೋದ್ಧಾರಕ್ಕಾಗಿ ದೇಣಿಗಿಯೂ ಸಹ ಕೊಡುತ್ತಾರೆ, ನಮ್ಮ ಗ್ರಾಮದಲ್ಲಿ ಧರ್ಮಸ್ಥಳ ಸಂಘವನ್ನು ಸರಿಯಾಗಿ ಬೆಳೆಸಿ ನಡೆಸಿಕೊಂಡು ಹೋದರೆ ನಮಗೆ ಹಣದ ಅಡಚಣೆ ಬರುವುದಿಲ್ಲ, ನಮ್ಮ ಹೂಲಮನೆ ಕೆಲಸಗಳ ನಡೆಯುತ್ತವೆ ಇದು ನಮ್ಮ ಪುಣ್ಯ , ಆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನೆಯ ಮಂಜುನಾಥ ದೇವರಿಗೆ ಮತ್ತು ವೀರೇಂದ್ರ ಹೆಗಡೆಯವರನ್ನು ಇಲ್ಲಿ ನಾವು ಸ್ಮರಿಸೋಣ ಎಂದರು ,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ