ಕಲಬುರಗಿಯ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಾಪ್ಲ ನಾಯಕ್ ತಾಂಡದಲ್ಲಿ ಬೇಸಿಗೆ ಕಾಲದ ನೀರಿನ ತೀವ್ರ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಮಾಡಬೇಕೆಂದು ಚಿಂಚೋಳಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ತಾಲೂಕ ಅಧ್ಯಕ್ಷರಾದ ಲಿಂಬಾಜಿ ಚವಾಣ್, ನೇತೃತ್ವದಲ್ಲಿ ಶಾದಿಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಮಾಧ್ಯಮದವರ ಜೊತೆಗೆ ಲಿಂಬಾಜಿ ಚವಾಣ್, ಅವರು ಮಾತನಾಡಿ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಾಪ್ಲ ನಾಯಕ್ ತಾಂಡದಲ್ಲಿ ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಎಂಬ ದೊಡ್ಡ ಸಮಸ್ಯೆಯು ನಿರ್ಮಾಣವಾಗಿದ್ದು, ತಾಂಡದ ಜನತೆಗಳು ಕುಡಿಯುವ ನೀರಿಗಾಗಿ ತೀವ್ರ ಹಠಾತ್ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಜನರ ಕಷ್ಟವನ್ನು ಮನಗಂಡು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ವತಿಯಿಂದ ಮನವಿ ಮಾಡಿಕೊಂಡಿದ್ದೇವೆ ಕೂಡಲೇ ಶಾದಿಪುರಗ್ರಾಮ ಪಂಚಾಯತ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚಾಪ್ಲ ನಾಯಕ್ ತಾಂಡದ ಜನರ ನೀರಿನ ಕೊರತೆಯನ್ನು ತಕ್ಷಣವೇ ಪರಿಹರಿಸಲು ಹಳೆಯ ಬೋರ್ವೆಲ್ಗಳಿಗೆ ಮರುಸೇವೆಯನ್ನು, ಹೊಸ ಬೋರ್ವೆಲ್ಗಳು ಅಥವಾ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಿ ಜನರ ಸಂಕಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕೆಂದು ಚಿಂಚೋಳಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ತಾಲೂಕ ಅಧ್ಯಕ್ಷರಾದ ಲಿಂಬಾಜಿ ಚವಾಣ್, ಅವರು ಆಗ್ರಹಿಸಿದ್ದಾರೆ
